
UDUPI : ಆಫ್ರಿಕನ್ ತಳಿಯ ಬಸವನ ಹುಳದ ಕಾಟ
ಉಡುಪಿ ನಗರದ ಹೊರವಲಯ ಪರ್ಕಳದ ದೇವಿ ನಗರದಲ್ಲಿ ಆಫ್ರಿಕನ್ ತಳಿಯ ಬಸವನ ಹುಳದ ಕಾಟ ಶುರುವಾಗಿದ್ದು, ಊರವರಲ್ಲಿ ಆತಂಕ ಹೆಚ್ಚಾಗಿದೆ. ಪರ್ಕಳ ಬಿಎಂ ಸ್ಕೂಲ್ ನ ಕಾಂಪೌಂಡ್, ಪುಟಾಣಿಗಳ ಅಂಗನವಾಡಿಯ ಗೋಡೆ, ಹಾಗೂ ಪರ್ಕಳ ದೇವಿ ನಗರದ ಅಬ್ದುಲ್ ಸತ್ತಾರ್ ಅವರ ಮನೆಯ ಕಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸನ ಹುಳು ಬಾದೆ ಕಂಡು ಬಂದಿದೆ. ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ. ಈಹುಳವು ಸುರಿಸುವ ಎಂಜಲು ವಾಸನೆಯಿಂದ ಕೂಡಿರುತ್ತದ್ದು, ರಾತ್ರಿಯ ಹೊತ್ತು ಶಬ್ದ ಮಾಡುತ್ತದೆ. ಮಳೆಬಂದಾಗ ಭೂಮಿಯ ಮೇಲೆ ಸಂಚರಿಸುತ್ತದೆ.. ರಾತ್ರಿ ಹೊತ್ತು ಸಂಚಾರ ಜಾಸ್ತಿಯಾಗಿರುತ್ತದೆ.. ಮನೆಯ ಒಳಗೆ ಎಲ್ಲಾ ಬರುತ್ತದೆ. ಹಾಗಾಗಿ ನಗರ ಸಭೆಯ ಆರೋಗ್ಯ ಅಧಿಕಾರಿಗಳು, ಈ ಹುಳು ಬಾಧೆಗೆ ಕೀಟನಾಶಕ ಸಿಂಪಡಿಸಿ. ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಅಂತ ಊರವರು ಒತ್ತಾಯಿಸಿದ್ದಾರೆ..