UDUPI : ಸಾಲದ ಕಂತು ಬಾಕಿ ಪ್ರಶ್ನಿಸಿದಕ್ಕೆ ಹಲ್ಲೆ ಕೊಲೆ ಬೆದರಿಕೆ
Wednesday, June 15, 2022
ಸಂಘದಲ್ಲಿ ಸಾಲದ ಹಣ ಬಾಕಿ ಇದ್ದದನ್ನು ಕೇಳಿದಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದದಾರೆ ಎನ್ನಲಾದ ಘಟನೆ ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ನಡೆದಿದೆ. ಶೋಭಾ ಖಾರ್ವಿ ಎಂಬುವವರು, ರೇಖಾ ಖಾರ್ವಿ ಹಾಗೂ ಅವರ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಶೋಭಾ ಖಾರ್ವಿ, ಹಾಗೂ ರೇಖಾ ಖಾರ್ವಿ ಖಾಸಗಿ ಸಂಘವೊಂದರ ಸದಸ್ಯರಾಗಿದ್ದು, ರೇಖಾ ಖಾರ್ವಿ ಶೋಭಾ ಖಾರ್ವಿ ಹೆಸರಿನಲ್ಲಿ, ಸಂಘದಲ್ಲಿ ಒಂದು ಲಕ್ಷ ಹಣ ಪಡೆದಿದ್ದರು. ಈ ವಿಚಾರವಾಗಿ ಸರಿಯಾಗಿ ಕಂತು ಕಟ್ಟದ ರೇಖಾ ಖಾರ್ವಿ ಅವರಲ್ಲಿ ಸಂಘದ ಹಣ ಕಟ್ಟುವಂತೆ ಕೇಳಿದ್ದು, ಇದೇ ವಿಚಾರವಾಗಿ, ರೇಖಾ ಖಾರ್ವಿ ಹಾಗೂ ಅವರ ಮನೆಯವರು ನನ್ನ ಮನೆಗೆ ಬಂದು ಹಣ ಕೊಡುದಿಲ್ಲ ಅಂತ ಹೇಳಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.