
UDUPI: ಹೊಳೆಯಲ್ಲಿ ಸತ್ತು ತೇಲುತ್ತಿರುವ ಮೀನುಗಳು ; ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ
Tuesday, June 14, 2022
ಉಪ್ಪು ಮಿಶ್ರಿತ ನೀರಿನ ಹೊಳೆಯಲ್ಲಿ ಭಾರಿ ಪ್ರಮಾಣದ ಮೀನುಗಳು ಸತ್ತು ತೇಲುತ್ತಿರುವ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪಾರಂಪಳ್ಳಿಯಲ್ಲಿ ನಡೆದಿದೆ. ತೋಡ್ಕಟ್ಟು ಬಳಿ
ಸೇತುವೆ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೊಳೆಗೆ ಮಣ್ಣು ಹಾಕಿ ಬಂದ್ ಮಾಡಿದ್ರು. ಮಳೆಗಾರ ಆರಂಭ ಆಗುವ ಹಿನ್ನೆಲೆ ಮಣ್ಣನ್ನು ಏಕಾಏಕಿ ತೆರವುಗೊಳಿಸದ ಕಾರಣ ಮೀನುಗಳ ಮಾರಣ ಹೋಮ ನಡೆದಿದೆ ಅಂತ ಸ್ಥಳೀಯರು ಶಂಕಿಸಿದ್ದಾರೆ. ಪಾರಂಪಳ್ಳಿ, ಕೋಡಿ ಆಸುಪಾಸು ಹಾಗೂ ಸಮುದ್ರ ಸೇರುವ ಸ್ಥಳದಲ್ಲಿ ಮೀನುಗಳು ಸತ್ತು ಬದಿಗೆ ಸೇರಿದು ವಾಸನೆ ಬೀರುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ರು, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.