ನೂಪುರ್ ಶರ್ಮಾಳನ್ನು ಕ್ಷಮಿಸಿ ಎಂದ ಜಮಾಅತ್ ಉಲೇಮಾ ಹಿಂದ್
Tuesday, June 14, 2022
ನವದೆಹಲಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಅಮಾನತಾದ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಇಸ್ಲಾಂ ಧರ್ಮದ ಪ್ರಕಾರ ಕ್ಷಮಿಸಬೇಕು ಎಂದು ಜಮಾತ್ ಉಲೇಮಾ ಎ ಹಿಂದ್ ನ ಅಧ್ಯಕ್ಷ ಸುಹೈಬ್ ಖ್ವಾಸ್ಮಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಸ್ಲಾಂ ಕ್ಷಮೆಯ ಧರ್ಮ. ಈ ಪ್ರಕಾರ ನೂಪುರ್ ಶರ್ಮಾಳನ್ನು ಕ್ಷಮಿಸಬೇಕಾಗಿದೆ. ಅಷ್ಟೇ ಅಲ್ಲ ನೂಪುರ್ ಹೇಳಿಕೆ ವಿರೋಧಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸುವುದು ಒಪ್ಪುವಂತದಲ್ಲ ಎಂದು ಜಮಾತ್ ಉಲೇಮಾದ ಖ್ವಾಸ್ಮಿ ತಿಳಿಸಿದ್ದಾರೆ. ಇದೇ ವೇಳೆ ಅವರು ನೂಪುರ್ ಶರ್ಮಾಳನ್ನು ವಜಾಗೊಳಿಸಿರುವ ಬಿಜೆಪಿ ಕ್ರಮವನ್ನು ಶ್ಲಾಘಿಸಿದ್ದಾರೆ.