-->

UDUPI:  ಇಂದು ರಾತ್ರಿ ಕಾಣಿಸಲಿದೆ "ಸೂಪರ್ ಮೂನ್"

UDUPI: ಇಂದು ರಾತ್ರಿ ಕಾಣಿಸಲಿದೆ "ಸೂಪರ್ ಮೂನ್"

ಇಂದು ಜ್ಯೇಷ್ಠ ಮಾಸದ ಹುಣ್ಣಿಮೆಯಾಗಿದ್ದು, ರಾತ್ರಿ ಚಂದ್ರ ಸೂಪರ್ ಮೂನ್ ಆಗಿ ಗೋಚರಿಸಲಿದ್ದಾನೆ. ಈ ದಿನ ಚಂದ್ರ ಭೂಮಿಯ ಸುತ್ತ 28 ದಿನಗಳಿಗೊಮ್ಮೆ ಸುತ್ತುವ ತಿರುಗಾಟದಲ್ಲಿ  ಭೂಮಿಗೆ ಸರಾಸರಿ ದೂರಕ್ಕಿಂತ ಸುಮಾರು, 30000ಕಿ.ಮೀ ಹತ್ತಿರವಾಗಲಿದ್ದಾನೆ. ಚಂದ್ರನು ತನ್ನ ಧೀಘ ವೃತ್ತಾಕಾರದ ಪಥದಲ್ಲಿ 28 ದಿನಗಳಿಗೊಮ್ಮೆ  ಭೂಮಿಗೆ ಸಮೀಪ( ಪೆರಿಜಿ)  ಹಾಗೂ ದೂರದ (ಅಪೊಜಿ) ಬರುವುದು ವಾಡಿಕೆ. ಈ ಪೆರಿಜಿಗೆ ಬಂದಾಗ ಹುಣ್ಣುಮೆ ಯಾದರೆ ಸೂಪರ್ ಚಂದ್ರ. ಹತ್ತಿರ ಬರುವುದರಿಂದ ಈ ದಿನ ಚಂದ್ರ ನಮಗೆ ಸುಮಾರು 15 ಅಂಶ ಗಾತ್ರ ದಲ್ಲಿ ದೊಡ್ಡದಾಗಿ 25 ಅಂಶ  ಹೆಚ್ಚಿನ ಬೆಳಕಿಂದ ಖುಷಿ ಕೊಡುತ್ತದೆ. ಚಂದ್ರ ಭೂಮಿ ಗಳ ಸರಾಸರಿ ದೂರ 3 ಲಕ್ಷ ದ 84 ಸಾವಿರ ಕಿಮೀ ಆದರೆ ಇಂದು, 3 ಲಕ್ಷದ 57 ಸಾವಿರ ದೂರದಲ್ಲಿರುತ್ತಾನೆ ಅಂತ ಉಡುಪಿಯ ಖಗೋಳ ತಜ್ಞ ಡಾ.ಎ. ಪಿ ಭಟ್ ತಿಳಿಸಿದ್ದಾರೆ..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99