Header Ad

UDUPI: ಅಕ್ರಮ ಕಸಾಯಿಖಾನೆಗೆ ದಾಳಿ; ನಾಲ್ವರು ವಶಕ್ಕೆ

ಉಡುಪಿಯ ಜಿಲ್ಲೆಯ ಉಚ್ಚಿಲ ಭಾಸ್ಕರ ನಗರ ಜುಮ್ಮಾ ಮಸೀದಿ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳು, ಒಂದು ಜೀವಂತ ಹಸು, ಮಾಂಸಕ್ಕೆ ಕಡಿಯಲಾದ ಹಸು ಹಾಗೂ ಮಾರಾಟಕ್ಕೆ ಕಡಿಯಲಾಗಿದ ಮಾಂಸವನ್ನು  ವಶಪಡಿಸಿಕೊಂಡಿದ್ದಾರೆ.  ಉಚ್ಚಿಲ ಭಾಸ್ಕರ ನಗರದಲ್ಲಿ ಸಬಾನ್ ಎಂಬವರ ಮನೆಯಲ್ಲಿ ಈ ಕಸಾಯಿಕಾನೆ ನಡೆಯುತ್ತಿದ್ದ ಬಗ್ಗೆ  ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಮಹಮ್ಮದ್ ರಫೀಕ್, ಇಲಿಯಾಸ್, ಮಹಮ್ಮದ್ ಮೋಹಿದ್ದೀನ್, ಮೊಯ್ದಿನಬ್ಬ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ದಿಯು ರಫೀಕ್ ಎಂಬಾತ ಪರಾರಿಯಾಗಿದ್ದಾನೆ. 
ಇತ್ತೀಚಿನ ಸುದ್ದಿಗಳು