UDUPI : ಪೊಲೀಸರ ಸಮಯಪ್ರಜ್ಞೆಯಿಂದ ಬದುಕಿದ ಆತ್ಮಹತ್ಯೆಗೆ ಯತ್ನಿಸಿದ ಯುವಕ
Friday, June 3, 2022
ಉಡುಪಿ ನಗರ ಠಾಣೆಯ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಆತ್ಮಹತ್ಯೆಗೆ ಯತ್ನಿಸಿಸಿದ್ದ ಯುವಕನೊಬ್ಬನ ಜೀವ ಉಳಿದಿದೆ. ಉಡುಪಿಯ ರೋಹನ್ ರಾಜೇಶ್ ಜತ್ತನ ಆತ್ಮಹತ್ಯೆಗೆ ಯತ್ನಿಸಿ, ಪೊಲೀಸರಿಂದ ರಕ್ಷಿಸಲ್ಪಟ್ಟ ಯುವಕ. ಕೌಟುಂಬಿಕ ಸಮಸ್ಯೆಯಿಂದ ಖಿನ್ನತೆಗೆ ಒಳಗಾಗಿದ್ದ ರೋಹನ್ ರಾಜೇಶ್ ಜತ್ತನ, ಉಡುಪಿ ನಗರದ ಖಾಸಗಿ ಲಾಡ್ಜಿನಲ್ಲಿ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು, ಈ ವೇಳೆ ಮಂಗಳೂರಿನ ಆದಿತ್ಯ ಎಂಬ ಗೆಳೆಯನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ತಿಳಿಸಿದ್ದ. ಕೂಡಲೇ ಆದಿತ್ಯ ಮಂಗಳೂರು ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದರು. ಮಂಗಳೂರಿನಿಂದ ಉಡುಪಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಪವೃತ್ತರಾದ ಉಡುಪಿ ನಗರಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್ ಪೊಲೀಸರೊಂದಿಗೆ ಲಾಡ್ಜ್‌ಗೆ ತೆರಳಿ ಆತ್ಮಹತ್ಯೆ ಯತ್ನಿಸಿದ್ದ ರೋಹನ್‌ನನ್ನು ಬಚಾವು ಮಾಡಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ..