-->
UDUPI : ತಲವಾರಿನಲ್ಲಿ ಕೇಕ್ ಕತ್ತರಿಸಿ ಬರ್ತಡೆ ಆಚರಣೆ; ಮೂವರನ್ನು ವಶಕ್ಕೆ ಪಡೆದ ಪೋಲಿಸರು

UDUPI : ತಲವಾರಿನಲ್ಲಿ ಕೇಕ್ ಕತ್ತರಿಸಿ ಬರ್ತಡೆ ಆಚರಣೆ; ಮೂವರನ್ನು ವಶಕ್ಕೆ ಪಡೆದ ಪೋಲಿಸರು

ತಲವಾರಿನಲ್ಲಿ ಕೇಕ್  ತುಂಡರಿಸಿ  ಬರ್ತ್ ಡೇ ಆಚರಿಸಿದ ಏಳು ಮಂದಿಯ ವಿರುದ್ಧ ಉಡುಪಿಯ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಜೀತೇಂದ್ರ ಶೆಟ್ಟಿ, ಗಣೇಶ್ ಪೂಜಾರಿ ಹಾಗೂ ಶರತ್ ಶೆಟ್ಟಿ ಎಂಬರನ್ನು ವಶಕ್ಕೆ ಪಡೆಯಲಾಗಿದ್ದು , ಉಳಿದಂತೆ ತಲೆ ಮರೆಸಿಕೊಂಡಿರುವ ಬರ್ತ್ ಡೇ  ಯುವಕ ನಿರಂಜನ್ ಶೆಟ್ಟಿಗಾರ್, ತನುಜ್, ಸೂರಜ್ ಹಾಗೂ ಅನಿಶ್ 
ಇವರುಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಳೆದ ಮೂವತ್ತನೇ ತಾರೀಕಿನಂದು ಪಡುಬಿದ್ರಿಯ ಜೀತೇಂದ್ರ ಶೆಟ್ಟಿ ಮನೆಯಲ್ಲಿ ಈ ಏಳು ಮಂದಿ ಮಾರಾಕಾಯುಧ ಬಳಸಿ ನಿರಂಜನ್ ಶೆಟ್ಟಿಗಾರ್ ಎಂಬಾತನ ಹುಟ್ಟು ಹಬ್ಬ ಆಚರಿಸಿದ್ದು, ಈ ವಿಡಿಯೋ ತುಣುಕನ್ನು ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.  ಈ ವಿಡಿಯೋ ವೀಕ್ಷೀಸಿದ ಉನ್ನತ ಪೊಲೀಸ್ ಅಧಿಕಾರಿಗಳು ಉಡುಪಿ ಎಸ್ಪಿಗೆ ಕಾನೂನು ಕ್ರಮಕ್ಕಾಗಿ ಆದೇಶಿಸಿದ ಮೇರೆಗೆ, ಅವರು ಕಾಪು ಸರ್ಕಲ್ ಇನ್ಸ್ ಪೆಕ್ಟರ್ ಹಾಗೂ ಪಡುಬಿದ್ರಿ ಎಸ್ಸೈಯವರಿಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ  ಪಡುಬಿದ್ರಿಯ ಕಾರ್ಕಳ ರಸ್ತೆಯಲ್ಲಿರುವ ಜಾರಪ್ಪ ಮನೆಗೆ ದಾಳಿ ಮಾಡಿದ ಪೊಲೀಸ್  ಅಲ್ಲಿದ್ದ ಮೂವರನ್ನು ವಶಕ್ಕೆ ಪಡೆದಿದ್ದಾರೆ..

Ads on article

Advertise in articles 1

advertising articles 2

Advertise under the article