
Police ಠಾಣೆಯ ಗಿಡಗಳನ್ನು ತಿಂದ ಹಸುವನ್ನು ಪೊಲೀಸರು ಮಾಡಿದ್ದೇನು ಗೊತ್ತಾ?
Monday, June 13, 2022
ಹಾಸನ: ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ತಿಂದಿದ್ದಕ್ಕೆ ಕೋಪಗೊಂಡ ಠಾಣಾ ಸಿಬ್ಬಂದಿ ಹಸುಗಳನ್ನು ಠಾಣೆಯಲ್ಲೇ ಕಟ್ಟಿ ಹಾಕಿದ ವಿಚಿತ್ರ ಘಟನೆ ಇಲ್ಲಿನ ಬೇಲೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆ ಕಾಂಪೌಂಡ್ ಆವರಣದೊಳಗೆ ಬೇಲೂರು ನೆಹರು ನಿವಾಸಿಗಳಾದ ಸಿದ್ದಮ್ಮ ಮತ್ತು ನಿಂಗಮ್ಮರ ಹಸುಗಳು ನುಗ್ಗಿ ಅಲ್ಲಿದ್ದ ಗಿಡಗಳನ್ನು ಮೇಯ್ದಿವೆ. ಇದರಿಂದ ಕೆರಳಿದ ಠಾಣಾ ಸಿಬ್ಬಂದಿ ಇನ್ಸ್ಪೆಕ್ಟರ್ ಆದೇಶದಂತೆ ಹಸುಗಳನ್ನು ಠಾಣೆ ಬಳಿಯಲ್ಲೇ ಕಟ್ಟಿ ಹಾಕಿದ್ದಾರೆ. ವೃದ್ಧೆಯರಿಬ್ಬರು ಹಸುಗಳನ್ನು ಬಿಡಿ ಎಂದು ಬೇಡಿಕೊಂಡರೂ ಪೊಲೀಸರು ಬಿಟ್ಟುಕೊಟ್ಟಿಲ್ಲ.
ವೃದ್ಧೆಯರಿಬ್ಬರು ಕಾಡಿ ಬೇಡಿದ ಹಿನ್ನೆಲೆಯಲ್ಲಿ ಕೊನೆಗೆ ರಾತ್ರಿ 10:30 ರ ಹೊತ್ತಿಗೆ ಹಸುಗಳನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ.