ರಾತ್ರೋ ರಾತ್ರಿ ನವ ವಧುವರರನ್ನು police station ಗೆ ಕರೆದೊಯ್ದ ಪೊಲೀಸರು
Tuesday, June 14, 2022
ಮಂಡ್ಯ: ಪ್ರೀತಿಸಿ ಮದುವೆಯಾಗಿ ಪತಿಯ ಮನೆಯಲ್ಲಿದ್ದ ನವ ವದುವನ್ನು ಏಕಾಏಕಿ ಮನೆಗೆ ನುಗ್ಗಿ ಪೊಲೀಸರು ಠಾಣೆಗೆ ಕರೆದೊಯ್ದ ಘಟನೆ ಇಲ್ಲಿನ ಚೀರನಹಳ್ಳಿಯಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ಚೀರನಹಳ್ಳಿ ಗಂಗಾ ಮತಸ್ಥರ ಬಲ್ಲೇಶ ಮತ್ತು ಕೋಲಾರ ಜಿಲ್ಲೆಯ ಶಿಡ್ಲಘಟ್ಟ ನಿವಾಸಿಯಾದ ಗಂಗಾ ಎಂಬುವರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ವರ್ಷ ಜೂನ್ 8ರಂದು ರಿಜಿಸ್ಟರ್ ಮದುವೆಯಾಗಿದ್ದರು. ನಂತರ ಇಬ್ಬರೂ ಚೀರನಹಳ್ಳಿ ಬಲ್ಲೇಶ ನ ಮನೆಯಲ್ಲಿ ವಾಸವಿದ್ದರು.
ಈ ಕುರಿತು ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ವಧುವಿನ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ವಧುವನ್ನು ರಾತ್ರೋ ರಾತ್ರಿ ಎಳೆದೊಯ್ದಿದ್ದಾರೆ.
ಪೊಲೀಸರ ಈ ಕ್ರಮದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.