
'ನಿನ್ನಂತಹ ಹಲವರನ್ನು ನೋಡಿದ್ದೇನೆ. ನಿನ್ನ ಕೈಲಿ ಏನೂ ಮಾಡಕ್ಕೆ ಸಾಧ್ಯವಿಲ್ಲ' ಎಂದು inspectorಗೆ ಆವಾಝ್ ಹಾಕಿದ್ದು ಯಾರು ಗೊತ್ತಾ?
Tuesday, June 14, 2022
ಹುಬ್ಬಳ್ಳಿ: ಕಳ್ಳತನ ಪ್ರಕರಣ ಸಂಬಂಧ ಸ್ಥಳ ಪರಿಶೀಲನೆಗೆ ಬಂದ inspectorಗೆ ಸಂಘಪರಿವಾರದ ಮುಖಂಡನೊಬ್ಬ ಆವಾಝ್ ಹಾಕಿರುವ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ನಡೆದಿದೆ.
ಕಳ್ಳತನ ಪ್ರಕರಣ ಸಂಬಂಧ ಪರಿಶೀಲನೆ ಮಾಡಲು ಬಂದ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಮಲ್ಲಿಕಾರ್ಜುನ್ ಸತ್ತಿಗೇರಿ ಎಂಬ ವ್ಯಕ್ತಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಏಕ ವಚನದಲ್ಲಿಯೇ ಆವಾಜ್ ಹಾಕಿದ್ದಾನೆ. ಮಲ್ಲಿಕಾರ್ಜುನ್ ಸತ್ತಿಗೇರಿ ಹಿಂದೂಪರ ಸಂಘಟನೆ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.
"ನಿನ್ನಂತವರನ್ನ ಬಹಳ ಜನ ನೋಡಿದ್ದೇನೆ. ನಿನ್ನ ಕೈಯಲ್ಲಿ ಏನೂ ಮಾಡೋಕೆ ಸಾಧ್ಯವಿಲ್ಲ" ಎಂದು ಏಕವಚನದಲ್ಲೇ ಆವಾಝ್ ಹಾಕಿದ್ದಾನೆ ಎನ್ನಲಾಗಿದೆ.