Googleಗೇ 1900 ಕೋಟಿ ರೂ ದಂಡ ವಿಧಿಸಿದ ಕೋರ್ಟ್: ಯಾಕೆ ಗೊತ್ತಾ?
Saturday, June 18, 2022
ಮೆಕ್ಸಿಕೊ: ಗೂಗಲ್ ಬ್ಲಾಗ್ ಒಂದರಲ್ಲಿ ವಕಿಲರೋರ್ವರ ಕುರಿತಂತೆ ನಿರಾಧಾರ ಮಾಹಿತಿ ಹಂಚಲು ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮೆಕ್ಸಿಕೋದ ನ್ಯಾಯಾಲಯವೊಂದು ಗೂಗಲ್ ಸಂಸ್ಥೆಗೆ 1900 ಕೋಟಿ ರೂ ದಂಡ ವಿಧಿಸಿದೆ.
ಮೆಕ್ಸಿಕೋ ಸಿಟಿ ನಗರದ ಉಲ್ತಿಚ್ ರಿಕ್ಟರ್ ಮೊರೇಲ್ಸ್ ಗೂಗಲ್ ವಿರುದ್ಧ ಕೇಸ್ ಗೆದ್ದ ವಕೀಲ.
ತನ್ನ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಲು ಬ್ಲಾಗ್‌ವೊಂದಕ್ಕೆ ಗೂಗಲ್ ಅವಕಾಶ ಮಾಡಿಕೊಟ್ಟಿತು. ಇದರಿಂದ ತನಗೆ ಸಾಕಷ್ಟು ಹಾನಿಯಾಗಿದೆ ಎಂದು ಮೊರೇಲ್ಸ್ 2005ರಲ್ಲಿ ದೂರು ದಾಖಲಿಸಿದ್ದರು.
ಈ ಬ್ಲಾಗ್ ಅನ್ನು ಕಿತ್ತುಹಾಕಲು ಗೂಗಲ್ ಸಂಸ್ಥೆಗೆ ಮೊರೇಲ್ಸ್ ಮನವಿ ಮಾಡಿಕೊಂಡಿದ್ದರು. ಆದರೆ, ಇವರ ಮನವಿಗೆ ಗೂಗಲ್ ಕ್ಯಾರೇ ಎನ್ನಲಿಲ್ಲ. ಈ ಕಾರಣಕ್ಕೆ ಗೂಗಲ್ ಮೇಲೆ ವಕೀಲ ಮೋರೆಲ್ಸ್ ಪ್ರಕರಣ ದಾಖಲಿಸಿದ್ದರು.
ಮೆಕ್ಕಿಕೋ ಸಿಟಿ ನಗರದ ನ್ಯಾಯಾಲಯವು ಗೂಗಲ್‌ನಿಂದ ತಪ್ಪು ಆಗಿದೆ ಎಂದಿದ್ದು, "ಐದು ಬಿಲಿಯನ್ ಪೆಸೋಸ್'ನ್ನು ದಂಡವಾಗಿ ನೀಡುವಂತೆ ಗೂಗಲ್‌ಗೆ ಆದೇಶ ನೀಡಿದೆ. ಐದು ಬಿಲಿಯನ್ ಪೆಸೋಸ್ ಎಂದರೆ ಸುಮಾರು 1900 ಕೋಟಿ ಭಾರತೀಯ ರೂ ಆಗುತ್ತದೆ.