UDUPI : ಸಾಮಾಜಿಕ ಜಾಲತಾಣದಲ್ಲಿ ಯಶ್ಪಾಲ್ ಸುವರ್ಣಗೆ ಕೊಲೆ ಬೆದರಿಕೆ : ಆರೋಪಿ ಬಂಧನ
Saturday, June 18, 2022
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನ ಮಾರಿಗುಡಿ ಪೇಜ್‌ನಲ್ಲಿ ಮುತಾಲಿಕ್ ಹಾಗೂ ಯಶ್ಪಾಲ್ ಸುವರ್ಣಗೆ ಕೊಲೆ ಬೆದರಿಕೆ ಹಾಕಿದ ಕಿಡಿಗೇಡಿಯನ್ನು ಉಡುಪಿಯ ಕಾಪು ಪೊಲೀಸರು ಬಂಧಿಸೊದ್ದಾರೆ. ಮಹಮ್ಮದ್ ಶಫಿ ಬಂಧಿತ ಆರೋಪಿ.ಕೆಲ ದಿನಗಳ ಹಿಂದೆ ಆರೋಪಿ ಮಾರಿ ಗುರಿ ಪೇಜ್ ಮೂಲಕ ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ತಲೆ ಕಡಿದರೆ ತಲಾ ೧೦ ಲಕ್ಷ ನೀಡುದಾಗಿ ಪೋಸ್ಟ್ ಮಾಡಿದ್ದ. ಆರೋಪಿ ಮಹಮ್ಮದ್ ಶಫಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು. ಈತನನ್ನು ಮಂಗಳೂರಿನ ಸುರತ್ಕಲ್‌ನಲ್ಲಿ ಐಪಿ ವಿಳಾಸದ ಮೂಲಕ ಆರೋಪಿಯನ್ನ ಬಂಧಿಸಿದ್ದು, ಮಹಮ್ಮದ್ ಶಫಿ ಮಂಗಳೂರಿನ ಬಜ್ಪೆ ನಿವಾಸಿಯಾಗಿದ್ದಾನೆ. ಲಾರಿಗಳ ಸೂಪರ್ ವೈಸರ್ ಆಗಿರುವ ಮಹಮ್ಮದ್ ಶಫಿ ಮಳಲಿ ಮಸೀದಿ ಮಂದಿರ ವಿವಾದದ ವಿಚಾರದಲ್ಲಿ ಯಶ್ಪಾಲ್ ಸುವರ್ಣ ಅವರನ್ನು ಟಾರ್ಗೆಟ್ ಮಾಡಿದ್ದ ಎನ್ನಲಾಗಿದೆ. ಈತನ ಜೊತೆಗೆ ಕೈಜೋಡಿಸಿರುವ ಮಹಮ್ಮದ್ ಆಸಿಫ್ ಗಾಗಿ ಪೊಲೀಸರು ಬಲೆಬೀಸಿದ್ದಾರೆ..