ಉಡುಪಿ ಮಲ್ಪೆಯಲ್ಲಿ Water Sports ಮೂರು ತಿಂಗಳು ನಿಷೇಧ
Tuesday, May 17, 2022
ಮಳೆಗಾಲದ ಮುಂದಿನ ಮೂರು ತಿಂಗಳ ಕಾಲ ಕಡಲು ಪ್ರಕ್ಷುಬ್ಧವಾಗಿರುವ ಕಾರಣ ಉಡುಪಿಯ ಮಲ್ಪೆ ಬೀಚ್‌ನಲ್ಲಿ ವಾಟರ್ ಸ್ಪೋರ್ಟ್ಸ್ ನಿಷೇಧವಾಗಿದೆ..
ಅಲ್ಲದೇ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗುದನ್ನು ನಿಷೇಧ ಮಾಡಲಾಗಿದೆ. ಹೀಗಾಗಿ ಮಲ್ಪೆ ಬೀಚ್ ಬರುವ ಪ್ರವಾಸಿಗರು ಇಳಿಮುಖವಾಗಿದ್ದು, ಮುಂದಿನ ಎರಡು ತಿಂಗಳ ಕಾಲ ಮಲ್ಪೆ ಬೀಚ್ ಖಾಲಿ ಖಾಲಿಯಾಗಿರಲಿದೆ.
ಆದ್ರೆ ವಾಟರ್ ಸ್ಪೋರ್ಟ್ಸ್ ಇದೆ ಅಂತ ಬರೋ ಪ್ರವಾಸಿಗರಿಗೆ ನಿರಾಸೆಯಾಗುತ್ತಿದೆ.. ಇನ್ನೂ, ಮೇ 31 ರಿಂದ ಜುಲೈ 31 ವರೆಗೂ ಮೀನುಗಾರಿಕೆ ನಿಷೇಧ ಇದೆ. ಈ ಸಂದರ್ಭದಲ್ಲಿ ಮೀನುಗಳ ಸಂತಾನೋತ್ಪತ್ತಿ ಕಾಲ, ಹೀಗಾಗಿ ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಬಾರದು ಅಂತ ನಿಯಮ ಇದೆ. ಆದ್ರೆ ಈ ಬಾರಿ ಚಂಡಮಾರುತದ ಪರಿಣಾಮ ಕಡಲು ಪ್ರಕ್ಷುಬ್ಧವಾಗಿದ್ದು ಕಡಲ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ ಜಿಲ್ಲಾಡಳಿತ ಕೆಲ ದಿನಗಳ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಿದೆ ಹೀಗಾಗಿ ಬಹುತೇಕ ಬೋಟ್‌ಗಳು ಈ ಬಾರಿ ಅವಧಿಗೂ ಮೊದಲ ಬಂದರಿನಲ್ಲಿ ಲಂಗರು ಹಾಕಿವೆ..