UDUPI- ಮನೆ ಮೇಲೆ ಬೃಹತ್ ಗಾತ್ರದ ಮರ ; ಅದೃಷ್ಟವಶಾತ್ ಮನೆಯೊಳಗಿದ್ದವರು ಪಾರು
Tuesday, May 17, 2022
ಉಡುಪಿ ಜಿಲ್ಲೆಯಾದ್ಯಂತ ನಿನ್ನೆ ಸಂಜೆಯಿಂದ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಸಾಂತಾವರ ಎಂಬಲ್ಲಿ ಎರಡು ಮನೆಗಳಿಗೆ ಬಾರೀ ಹಾನಿಯುಂಟಾಗಿದೆ.
ಕಂದಾವರ ಗ್ರಾ.ಪಂ ವ್ಯಾಪ್ತಿಯ ಸಾಂತಾವರದಲ್ಲಿ ಶಾರದಾ ದೇವಾಡಿಗ, ಬಾಬಿ ದೇವಾಡಿಗ ಎನ್ನುವವರ ಮನೆಗೆ ಹಾನಿಯಾಗಿದೆ. ಬಾರೀ ಗಾಳಿಗೆ ಮನೆ ಮೇಲೆ ಬೃಹತ್ ಗಾತ್ರದ ಮಾವಿನ ಮರ ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.
ಮನೆಯೊಳಗಿದ್ದ ಗೃಹೋಪಯೋಗಿ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದವರು ಪಾರಾಗಿದ್ದಾರೆ.ಎರಡು ಮನೆ ಸೇರಿ ಅಂದಾಜು 7-8 ಲಕ್ಷ ಹಾನಿ ಸಂಭವಿಸಿದೆ.