UDUPI-ಯಾರಾದರೂ ಚಾಕು ಹಾಕಿದರೆ ಏನು ಮಾಡುವುದು ಕಾಳಿ ಸ್ವಾಮಿ ಆತಂಕ
Tuesday, May 17, 2022
ಕಾಳಿ ಸ್ವಾಮಿ ಕನ್ನಡಪರ ಸಂಘಟನೆಗಳಿಂದ ಮಸಿ ಬಳಿಸಿಕೊಂಡ ಬಗ್ಗೆ ಪರ ವಿರೋಧ ಕೇಳಿ ಬರುತ್ತಿದೆ. ಇದೇ ವಿಚಾರವಾಗಿ ಉಡುಪಿಯ ,ಕೊಲ್ಲೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕಾಳಿ ಸ್ವಾಮಿ, ಮಸಿ ಬಳಿದವರು ವಿಪರೀತ ಕುಡಿದಿದ್ದರು. ವಾಸನೆ ಬರುತ್ತಿದ್ದರು. ಮಸಿ ಬಳಿದರೆ ಸ್ನಾನ ಮಾಡಿದರೆ ಹೋಗುತ್ತೆ ,ಆದರೆ ಯಾರಾದರೂ ಚಾಕು ಹಾಕಿದರೆ ಏನು ಮಾಡುವುದು ಎಂದು ಆತಂಕ ವ್ಯಕ್ತಪಡಿಸಿದರು.
ದೇವಸ್ಥಾನದ ಆವರಣದಲ್ಲಿ ಮುಸ್ಲಿಮರಿಗೆ ವ್ಯಾಪಾರಸ್ಥರನ್ನು ದೂರ ಇಟ್ಟಿದ್ದನ್ನು ಇದೇ ವೇಳೆ ಸಮರ್ಥಿಸಿಕೊಂಡರು. ವ್ಯಾಪಾರ ನಿರ್ಬಂಧ ಹಳೆಯ ಕಾನೂನು. ಈಗ ತಂದಿದ್ದಲ್ಲ.ಅವರು ದೂರ ವ್ಯಾಪಾರ ಮಾಡಲಿ ,ಆದರೆ ಆವರಣದಲ್ಲಿ ಬೇಡ ಎಂದು ಹೇಳಿದ್ದರು. ಸರಕಾರದ ಕಾನೂನನ್ನು ಪಾಲಿಸದೆ ಅಂಗಡಿಗಳನ್ನು ಮುಚ್ಚಿದರು.ಈಗ ನಾವು ಮುಚ್ಚಿಸುತ್ತಿದ್ದೇವೆ ಎಂದು ಹೇಳಿದರು.