UDUPI- ದೇವಸ್ಥಾನಕ್ಕೆ ಅಂತ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ
Tuesday, May 17, 2022
ದೇವಸ್ಥಾನಕ್ಕೆ ಅಂತ ಮನೆಯಲ್ಲಿ ತಿಳಿಸಿ ಹೋರ ಹೋಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಕಟಪಾಡಿಯ ನಿವಾಸಿ ಪ್ರಕಾಶ್ ರಾವ್ ( 46) ನಾಪತ್ತೆಯಾದವರು. ಮೇ 9 ರಂದು ಕಟಪಾಡಿಯ ಮನೆಯಲ್ಲಿ ಬ್ರಹ್ಮಾವರ ತಾಲೂಕು ಸೈಬರ್ ಕಟ್ಟೆ ಗರಿಕೆಮಠ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದ ಹೊರಗೆ ತೆರಳಿದ್ದ ಪ್ರಕಾಶ್ ರಾವ್ ಬಳಿಕ ಮನೆಗೆ ಬಾರದೇ ನಾಪತ್ತೆ ಆಗಿದ್ದಾರೆ. ವಿವಾಹಿತರಾಗಿರುವ ಪ್ರಕಾಶ್ ರಾವ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯವರು ಪ್ರಕಾಶ್ ಅವರಿಗಾಗಿ ಹುಡುಕಾಟ ನಡೆಸಿದ್ದು, ನಾಪತ್ತೆ ಆದ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ..