UDUPI: ಅಹಿಂಸೆ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ : ಪ್ರತಾಪ್ ಸಿಂಹ
Saturday, May 28, 2022
ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್
ಅಹಿಂಸೆ ಕೇವಲ ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ. ಜಗತ್ತಿನ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ ಅಂತ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದ ಪ್ರತಾಪ್ ಸಿಂಹ,
ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ ನಮ್ಮ ಪಾಠಗಳಲ್ಲಿ ಡೆಲ್ಲಿ ಸುಲ್ತಾನರು ಮೊಘಲರು ಮಾತ್ರ ಇದ್ದಾರೆ. ಮೊಘಲರು ಬರುವ ಮೊದಲು ಭಾರತಕ್ಕೆ ಇತಿಹಾಸವೇ ಇಲ್ಲವೇ?. ಚೋಳರು, ಚೇರರು ಗುಪ್ತರು ರಾಷ್ಟ್ರಕೂಟರು ಕದಂಬರು ಹೊಯ್ಸಳರು ಪೇಶ್ವೆಯನ್ನು ನಾವು ಮರೆಯೇ ಬಿಟ್ಟೆವು ಅಂತ ಪ್ರತಾಪ್ ಹೇಳಿದ್ದಾರೆ..