UDUPI : ನಾಂಜಾರು ಶ್ರೀ ಧರ್ಮ ಜಾರಂದಾಯ ಸನ್ನಿಧಿಯಲ್ಲಿ ಪವಾಡ
Saturday, May 28, 2022
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನಾಂಜಾರು ಶ್ರೀ ಧರ್ಮ ಜಾರಂದಾಯ ಸನ್ನಿಧಿಯಲ್ಲಿ ಪವಾಡವೊಂದು ನಡೆದಿದೆ.
ಮೇ ೧೮ ರಂದು ಪಡುಬಿದ್ರಿಯ ಮದುವೆ ಕಾರ್ಯಕ್ರಮದಲ್ಲಿ ಹೆತ್ತವರ ಜತೆಗಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮಧ್ಯಾಹ್ನದ ಬಳಿಕ ಕಾಣೆಯಾಗಿತ್ತು. ಎಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ, ನಂತರ 24ನೇ ತಾರೀಖಿನಂದು ನಾಂಜಾರು ಶ್ರೀ ಧರ್ಮ ಜಾರಂದಾಯ ಮತ್ತು ಪರಿವಾರ ಶಕ್ತಿಗಳನ್ನು ಸರ ದೊರಕಿಸಿಕೊಡುವಂತೆ ಪೋಷಕರು ಪ್ರಾರ್ಥಿಸಿದ್ರು. ಇದಾಗಿ ಮೂರೇ ದಿನಕ್ಕೆ, ಬೆಳಗ್ಗೆ ದೈವಸ್ಥಾನದ ಮುಂಭಾಗದ ಕಾಲು ದೀಪವನ್ನು ಉರಿಸಲು ಬಂದ ದೈವದ ಚಾಕರಿಯವರಿಗೆ ಕಾಲುದೀಪದಲ್ಲಿ ಚಿನ್ನದ ಸರ ಸುತ್ತಿಕೊಂಡು ಇರುವುದು ಕಂಡುಬಂತು. ಮಗುವಿನ ತಾಯಿ ಬಂದು ಪರಿ ಶೀಲಿಸಿದಾಗ ಕಳೆದುಹೋಗಿದ್ದ ಸರ ಅದುವೇ ಎಂಬುದು ಖಚಿತವಾಗಿದೆ. ಭಕ್ತರು ದೈವದ ಪವಾಡ ಕಂಡು ಅಚ್ಚರಿಯಾಗಿದ್ದಾರೆ.