
UDUPI: ಭೋಜಣ್ಣ ಆತ್ಮಹತ್ಯೆ ಪ್ರಕರಣ; ಗಣೇಶ್ ಶೆಟ್ಟಿ ಮೊಳಹಳ್ಳಿ ಬಂಧನ
ಉಡುಪಿಯ ಕುಂದಾಪುರದ ಚಿನ್ಮಯಿ ಆಸ್ಪತ್ರೆ ಮಾಲಿಕ ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಲ್ಡ್ ಜುವೆಲ್ಲರ್ಸ್ ಮಾಲಕ ಗಣೇಶ್ ಶೆಟ್ಟಿ ಮೊಳಹಳ್ಳಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಎರಡು ದಿನಗಳ ಹಿಂದೆ ಕಟ್ಟೆ ಭೋಜಣ್ಣ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದರು. ಗಣೇಶ್ ಶೆಟ್ಟಿ ಮತ್ತು ಇಸ್ಮಾಯಿಲ್ ಕೊಟ್ಟ ಸಾಲ ಹಿಂದುಗಿಸಲಿಲ್ಲ ಅಂತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಂಧಿತ ಮೊಳಹಳ್ಳಿ ಗಣೇಶ್ ಶೆಟ್ಟಿ ಮನೆಯ ಸಿಟೌಟ್ ನಲ್ಲಿ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ಭೋಜಣ್ಣ ಮಗ ಸುಧೀಂದ್ರ, ತಂದೆ ಸಾವಿಗೆ ಗಣೇಶ್ ಶೆಟ್ಟಿ ಮತ್ತು ಇಸ್ಮಾಯಿಲ್ ಪ್ರಚೋದನೆ ಕಾರಣ ಅಂತ ದೂರು ನೀಡಿದ್ದರು. ಇದರಂತೆ ಸೆಕ್ಷನ್ 306 ಅಡಿಯಲ್ಲಿ ಗಣೇಶ್ ಶೆಟ್ಟಿಯನ್ನು ಕುಂದಾಪುರ ಪೊಲೀಸರು ಬಂದಿಸಿದ್ದಾರೆ.