
UDUPI: ಶಿಲ್ಪಾ ಆತ್ಮಹತ್ಯೆ ಪ್ರಕರಣ ; ತನಿಖೆಗೆ ಎರಡು ತಂಡ ರಚನೆ
ಲವ್ ಜಿಹಾದ್‌ಗೆ ಬಲಿ ಅಂತ ಕರಾವಳಿಯಲ್ಲಿ ಬಾರೀ ಸುದ್ದಿಯಾದ ಶಿಲ್ಪಾ ದೇವಾಡಿಗ ಸಾವಿನ ಪ್ರಕರಣದ ಸಂಬಂಧಿಸಿದಂತೆ, ದೂರಿನಲ್ಲಿ ಉಲ್ಲೇಖಿಸಲಾಗಿರುವ ಅಝೀಜ್ ಮತ್ತು ಆತನ ಪತ್ನಿಯ ಬಂಧನ ಹಾಗೂ ಪ್ರಕರಣದ ತನಿಖೆಯ ಸಂಬಂಧ ಕುಂದಾಪುರ ಸಿಪಿಐ ಗೋಪಿಕೃಷ್ಣ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ ಅಂತ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ ಸಿದ್ದಲಿಂಗಪ್ಪ ಹೇಳಿದರು. ಸದ್ಯ ಆರೋಪಿಗಳು ಕುಂದಾಪುರದಿಂದ ತಪ್ಪಿಸಿಕೊಂಡಿದ್ದು ಕಾಸರಗೋಡು ಕಡೆ ತೆರಳಿರುವ ಬಗ್ಗೆ ಮಾಹಿತಿ ಇದ್ದು ನಮ್ಮ ಒಂದು ತಂಡ ಅಲ್ಲಿಗೆ ತೆರಳಿದ್ದು ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಆರೋಪಿ ಅಝೀಜ್ ಅವರ ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಶಿಲ್ಪಾ ಅವರು ವಿಷ ಸೇವನೆ ಮಾಡಿದ ಬಳಿಕ ಆಸ್ಪತ್ರೆಗೆ ಸೇರಿದ ವಿಚಾರದ ಪೊಲೀಸರಿಗೆ ತಡವಾಗಿ ತಿಳಿದು ಬಂದಿದ್ದು, ಆಕೆಯ ಸಾವಿನ ನಂತರ ಪ್ರಕರಣ ದಾಖಲಾಗಿದ್ದು ಅದರ ಬಳಿಕ ಇಲಾಖೆ ತನ್ನ ಕೆಲಸವನ್ನು ಆರಂಭಿಸಿದೆ. ಅಝೀಜ್ ಮತ್ತು ಶಿಲ್ಪಾ ಪರಸ್ಪರ ಪ್ರೀತಿಸುತ್ತಿದ್ದು ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದು, ಅದೇ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಅಝೀಜ್ ಮತ್ತು ಸಲ್ಮಾ ಮೇಲೆ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದರು.