
UDUPI; ಶಿಲ್ಪಾ ಸಾವಿಗೆ ಲವ್ ಜಿಹಾದ್ ಕಾರಣ; ಹಿಂದೂ ಸಂಘಟನೆ ಆರೋಪ
Thursday, May 26, 2022
ಉಡುಪಿಯ ಕುಂದಾಪುರದ ಉಪ್ಪಿನಕುದ್ರು ನಿವಾಸಿ ಶಿಲ್ಪಾ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ ಅಂತ ಹಿಂದೂ ಸಂಘಟನೆ ಆರೋಪಿಸಿದೆ.. ನಾಲ್ಕು ವರ್ಷಗಳ ಹಿಂದೆ ಮೂಡುಗೋಪಾಡಿ ನಿವಾಸಿ ಅಜೀಜ್ (೩೨) ಎಂಬಾತ ಶಿಲ್ಪಾ ಸ್ನೇಹ ಸಂಪಾದಿಸಿದ್ದ. ಬಳಿಕ ಆಕೆಯನ್ನು ದೈಹಿಕವಾಗಿ ಬಳಸಿ, ಆಕೆಯ ನಗ್ನ ಫೋಟೋಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಕೆಲವು ದಿನಗಳ ಹಿಂದೆ ಶಿಲ್ಪಾ ಮದುವೆಯಾಗುವಂತೆ ಅಜೀಜ್ ಗೆ ಕೇಳಿದಾಗ ಮತಾಂತರವಾಗುವಂತೆ ಒತ್ತಾಯ ಮಾಡಿದ್ದ. ಇದಕ್ಕೆ ಶಿಲ್ಪಾ ಒಪ್ಪದಿದ್ದಾಗ ಆಕೆ ಬೆತ್ತಲೆ ಫೋಟೋ ವಿಡಿಯೋ ವೈರಲ್ ಮಾಡುವುದಾಗಿ ವೈರಲ್ ಮಾಡುವ ಬೆದರಿಕೆ ಹಾಕಿದನಂತೆ. ಈ ಬೆನ್ನಲ್ಲೆ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹೀಗಾಗಿ ಆತ್ಮಹತ್ಯೆಗೆ ಅಜೀಜ್ ನೇರ ಕಾರಣ ಎನ್ನು ಆರೋಪ ಹಿಂದೂ ಸಂಘಟನೆಗಳದ್ದು. ಹೀಗಾಗಿ ಪೊಲೀಸರು ಲವ್ ಜಿಹಾದ್ ಎನ್ನುವ ಬಗ್ಗೆಯೂ ತನಿಖೆ ನಡೆಸಬೇಕು ಅಂತ ಮನವಿ ಸಲ್ಲಿಸಿದೆ..