
UDUPI: ತ್ರಿವರ್ಣ ಧ್ವಜದ ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ ; ಪ್ರತಾಪ್ ಸಿಂಹ
Saturday, May 28, 2022
ನಮ್ಮ ದೇಶದ ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು. ಆದರೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್. ಇದೇ ತ್ರಿವರ್ಣ ಧ್ವಜ ಮುಂದೊಂದು ದಿನ ಚಕ್ರ ಆಗುತ್ತದೆ ಅಂತ ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮ ಭಾಷಣದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅಂಡಮಾನ್ ಬರ್ಮಾ ಜೈಲಿನಲ್ಲಿ ಇದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು. ಪುಣೆಯ ಪ್ಯಾಲೇಸ್ ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರ ಆಗಲು ಸಾಧ್ಯವಿಲ್ಲ
ಕ್ಷಾತ್ರ ಗುಣ ಇಲ್ಲದಿದ್ದರೆ ಪ್ರಪಂಚದಲ್ಲಿ ಉಳಿಯಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ..ಸದ್ಯ ಈ ಹೇಳಿಕೆ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ.