Udupi ; ಡಿವೈಡರ್‌ಗೆ ಬೈಕ್ ಡಿಕ್ಕಿ ; ಓರ್ವ ಸಾವು, ಇನ್ನೊರ್ವ ಗಂಭೀರ
Wednesday, May 25, 2022
ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದು ವಿದ್ಯಾರ್ಥಿಯೊರ್ವ ಸಾವನ್ಪಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡ ಘಟನೆ ಉಡುಪಿಯ ಲಕ್ಷ್ಮೀಂದ್ರ ನಗರದ ಬಳಿ ನಡೆದಿದೆ. ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕೋಟೇಶ್ವರ ನಿವಾಸಿ ಶೋದನ್ ಶೆಟ್ಟಿ ಸಾವನ್ಪಿದ ಬೈಕ್ ಸವಾರ. ಹಿಂಬದಿಯಲ್ಲಿ ಕುಳಿತ್ತಿದ್ದ ಆಡ್ರಿನ್ ವಾಸ್ ಗಂಭೀರ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು ಸಂಜೆ ವೇಳೆ ಮಣಿಪಾಲದಿಂದ ಉಡುಪಿ ಕಡೆ ಬರುತ್ತಿದ್ದಾಗ ಲಕ್ಷ್ಮೀಂದ್ರ ನಗರದ ಬಳಿ, ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತ ತೀವ್ರತೆಗೆ ಶೋದನ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಡ್ರಿನ್ ವಾಸ್ ಗಂಭೀರ ಗಾಯಗೊಂಡಿದ್ದಾನೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..