UDUPI; ಖಜಕಿಸ್ತಾನ ದಲ್ಲಿ ನಡೆದ ವಿಶ್ವ ಪವರ್ ಲಿಪ್ಟಿಂಗ್ ಕಾರ್ಕಳದ ಅಕ್ಷತಾ ಪೂಜಾರಿಗೆ ಬೆಳ್ಳಿ ಪದಕ
Wednesday, May 25, 2022
ಉಡುಪಿಯ ಕಾರ್ಕಳದ ಬೋಳ ಗ್ರಾಮದ ಅಕ್ಷತಾ ಪೂಜಾರಿ
ಖಜಕಿಸ್ತಾನ ದಲ್ಲಿ ನಡೆದ ವಿಶ್ವ ಪವರ್ ಲಿಪ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದಾರೆ.
ಬೆಂಚ್ ಪ್ರೆಸ್ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಅಕ್ಷತಾ ಪೂಜಾರಿ ಪವರ್ ಲಿಫ್ಟಿಂಗ್ ನಲ್ಲಿ ಈಗಾಗಲೇ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹತ್ತಾರು ಪದಕಗಳನ್ನು ಬಾಚಿಕೊಂಡಿದ್ದಾರೆ. 2014 ನೇ ಸಾಲಿನ ಏಕಲವ್ಯ ಪ್ರಶಸ್ತಿ ಅಕ್ಷತಾ ಪೂಜಾರಿಗೆ ಒಲಿದಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿಯ ಪದಕ ಲಭಿಸಿರುವುದು ದೇಶ ಹೆಮ್ಮೆ ಪಡುವ ವಿಚಾರ.