UDUPI; ಬಿತ್ತನೆ ಬೀಜ, ಗೊಬ್ಬರ ವಿತರಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ; ರೈತರ ಆಕ್ರೋಶ
Thursday, May 19, 2022
ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಕೃಷಿ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ ಅಂತ ರೈತರು ಆಕ್ರೋಶ ಹೊರ ಹಾಕಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕ್ರಷಿ ಇಲಾಖೆಯಲ್ಲಿ ನಡೆದಿದೆ.
ಇವತ್ತು ಕೃಷಿ ಇಲಾಖಾ ಕಚೇರಿಯಲ್ಲಿ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಯಲ್ಲಿ ಅಂತ ರೈತರಿಗೆ ತಿಳಿಸಿದ್ದರು ಆದ್ರೆ ಇಲಾಖೆಯಲ್ಲಿ
ಒಂದೇ ಕಂಪ್ಯೂಟರ್ ಉಪಯೋಗಿಸಿ, ಹೆಚ್ಚಿನ ರೈತರನ್ನು ಮಳೆಯಲ್ಲೇ ನಿಲ್ಲಿಸಿದರು. ಇದರಿಂದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬಿತ್ತನೆ ಬೀಜ ಮತ್ತು ಗೊಬ್ಬರ ವಿತರಣೆಗೆ ಒಂದೇ ದಿನ ನಿಗದಿ ಮಾಡಿದ್ದು ಕೂಡ ರೈತರ ಬೇಸರಕ್ಕೆ ಕಾರಣವಾಯಿತು. ಒಂದೇ ದಿನವಾದ ಕಾರಣ ಸುಮಾರು 800 ಕ್ಕೂ ಹೆಚ್ಚು ರೈತರು ಸೇರಿದು ವಿತರಣೆಯಲ್ಲಿ ಗೊಂದಲ ಉಂಟಾಯಿತು..