-->
ads hereindex.jpg
 CAB ಚಾಲಕನನ್ನು ಮಣಿಪಾಲದಿಂದ ಕಾರವಾರಕ್ಕೆ ಕರೆದೊಯ್ದು ಸುಲಿಗೆ ಮಾಡಿದ  ನಾಲ್ವರು ಅರೆಸ್ಟ್

CAB ಚಾಲಕನನ್ನು ಮಣಿಪಾಲದಿಂದ ಕಾರವಾರಕ್ಕೆ ಕರೆದೊಯ್ದು ಸುಲಿಗೆ ಮಾಡಿದ ನಾಲ್ವರು ಅರೆಸ್ಟ್


ಉಡುಪಿ

ಬಾಡಿಗೆ ನೆಪದಲ್ಲಿ ಕ್ಯಾಬ್ ಚಾಲಕನೊಬ್ಬನನ್ನು ಉಡುಪಿಯ
ಮಣಿಪಾಲದಿಂದ ಕಾರವಾರಕ್ಕೆ ಕರೆದೊಯ್ದ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು ಚರಣ್ (35), ಶಿರ್ವ ನಿವಾಸ ಮೊಹಮ್ಮದ್ ಅಝರುದ್ದೀನ್ (39), ಬಂಟ್ವಾಳ ನಿವಾಸಿ ಶರತ್ ಪೂಜಾರಿ (36) ಮತ್ತು ಮಂಗಳೂರು ನಿವಾಸಿ ಜಯಪ್ರಸಾದ್ (43) ಬಂಧಿತ ಆರೋಪಿಗಳು. 80 ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ (61) ಎಂಬವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಎ.27ರಂದು ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಮಂದಿ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು. 


ರಾತ್ರಿ 8.40 ಗಂಟೆಗೆ ಅಂಕೋಲ ರೈಲ್ವೆ ನಿಲ್ದಾಣದ ಸಮೀಪ ಕಾರನ್ನು ಆರೋಪಿಗಳು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿಯು ಶ್ರೀಧರ ಭಕ್ತರ ಕುತ್ತಿಗೆಯನ್ನು ಒತ್ತಿ ಹಿಡಿದರು. ಬಳಿಕ ಚಾಲಕನನ್ನು ಬೆದರಿಸಿ, ಪರ್ಸ್‌ನಲ್ಲಿದ್ದ 3000 ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ಕಸಿದುಕೊಂಡರು. ಬಳಿಕ ಕುಂದಾಪುರದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರನ್ನು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತನಿಗೆ ಹೇಳಿದರು. ಕಾರಿನಿಂದ ಇಳಿದು ಎ.ಟಿ.ಎಂ ನ ಒಳಗೆ ಹೋದ ಶ್ರೀಧರ್ ಭಕ್ತ, ಬಳಿಕ ಹೊರಗೆ ಬಂದಾಗ, ಸ್ಥಳದಿಂದ  ಪರಾರಿಯಾಗಿದ್ದರು. ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು.‌

Ads on article

Advertise in articles 1

advertising articles 2