ಉಡುಪಿ; ಬಂದರಿನಲ್ಲಿ ಮೀನು ಹೊರುವ ಬಾಲಕನಿಗೆ SSLC ಯಲ್ಲಿ 625 ಅಂಕ..!
Thursday, May 19, 2022
ಇಂದು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಬಿಡುವಿನ ವೇಳೆಯಲ್ಲಿ ಮೀನು ಹೊರುವ ಕೆಲಸ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದ ಉಡುಪಿಯ ಪುನೀತ್ ನಾಯ್ಕ್ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾನೆ.
ಉಡುಪಿ ಜಿಲ್ಲೆಯ ಮಲ್ಪೆ ಸರ್ಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ವ್ಯಾಸಂಗ ಮಾಡಿದ ಪುನೀತ್ ನಾಯ್ಕ್, ಮೂಲತಃ ಕೊಪ್ಪಳದವನು. ತಂದೆ ತಾಯಿ ಉಡುಪಿಯಲ್ಲಿ ಕೂಲಿ ಮಾಡುತ್ತಿದ್ದರು. ಹೀಗಾಗಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರದ ಕಾರಣ, ಪುನೀತ್ ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನು ಹೋರುವ ಕೆಲಸ ಮಾಡುತ್ತಿದ್ದ, ಬೆಳಗ್ಗೆ ಬೇಗ ಎದ್ದು ಮೀನುಗಾರಿಕೆಯ ಕೆಲಸಕ್ಕೆ ಹೋಗಿ, 9 ಗಂಟೆಗೆ ಬಂದು ಶಾಲೆಗೆ ಹೋಗುತ್ತಿದ್ದ. ಯಾವುದೇ ಟ್ಯೂಷನ್ ಹೋಗದೇ ಮನೆಯಲ್ಲೆ ಓದಿ 625 ಅಂಕ ಗಳಿಸಿದ ಪುನೀತ್ ಮುಂದೆ ಉತ್ತಮವಾಗಿ ಓದಿ ಜಿಲ್ಲಾಧಿಕಾರಿ ಆಗಬೇಕೆಂಬ ಕಂಡಿದ್ದಾನೆ..