
ಉಡುಪಿ:ಪೇಟೆಗೆ ಹೋದ 24 ವರ್ಷದ ಯುವತಿ ಮನೆಗೆ ಬಾರದೇ ನಾಪತ್ತೆ
Friday, May 20, 2022
ಟೈಲರಿಂಗ್ ಬಟ್ಟೆ ತರಲು ಪೇಟೆಗೆ ಹೋದ ಯುವತಿ ಮನೆಗೆ ವಾಪಾಸು ಬಾರದೇ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ
ಬೈಂದೂರು ತಾಲೂಕಿನ ಮುದೂರು ಗ್ರಾಮದಲ್ಲಿ ನಡೆದಿದೆ.
ಹಾರ್ಕಿ ನಿವಾಸಿ ರೇಣುಕಾ (24) ನಾಪತ್ತೆಯಾದ ಯುವತಿ. ರೇಣುಕಾ ಮೇ 17ರಂದು ಸಂಜೆ 4 ಗಂಟೆ ಸುಮಾರಿಗೆ ಮುದೂರು ಸಿಟಿಯಿಂದ ಟೈಲರಿಂಗ್ ಬಟ್ಟೆ ತರಲು ಹೋಗಿದ್ದರು. ಆದರೆ ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಎಲ್ಲ ಕಡೆ ಹುಡುಕಾಟ ನಡೆಸಿದರು ರೇಣುಕಾ ಪತ್ತೆಯಾಗಲಿಲ್ಲ, ಹೀಗಾಗಿ ಕೊಲ್ಲೂರು ಠಾಣೆಗೆ ಪೋಷಕರು ದೂರು ನೀಡಿದ್ದಾರೆ. 5 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣ, ಸಪೂರ ಶರೀರ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ