-->

 ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಮೋದ್ ಮಧ್ವರಾಜ್

ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಮೋದ್ ಮಧ್ವರಾಜ್


ನಾನು ಅಶಿಸ್ತಿನ ಪಕ್ಷದಿಂದ, ಶಿಸ್ತಿನ ಪಕ್ಷಕ್ಕೆ ಬಂದವನು. ಬಿಜೆಪಿಯ ಶಿಸ್ತನ್ನು ನೋಡುವಾಗ ಹೆಮ್ಮೆ - ಸಂತೋಷ ಆಗುತ್ತೆ
ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ಸಂಘಟನಾತ್ಮಕ ವ್ಯತ್ಯಾಸದ ಅರಿವು ಆಗಿದೆ. ಬಿಜೆಪಿ ಬಹಳ ಶಿಸ್ತಿನ ಪಕ್ಷ‌  ಸಂಘಟನೆಯ ಬಗ್ಗೆ ಬಹಳಷ್ಟು ಒತ್ತು ಕೊಡುತ್ತಾರೆ. ಕಾಂಗ್ರೆಸ್ ಸಂಘಟನೆಯ ಕಡೆಗೆ ಏನು ಗಮನ ಕೊಟ್ಟಿಲ್ಲ ಬಿಜೆಪಿ ಆ ಕಡೆಗೆ ಗಮನ ಕೊಟ್ಟಿದೆ ಅನ್ನುವುದು ನನಗೆ ಈಗ ಅರಿವಾಗಿದೆ ಅಂತ ಮಾಜಿ ಸಚಿವ ಪ್ರಮೋದ್ ಮಧ್ಯರಾಜ್ ಹೇಳಿದ್ದಾರೆ. ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ನಷ್ಟವಾಗಿಲ್ಲ ಎನ್ನುವ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಪ್ರಮೋದ್,.ನಾನು ಪೂರ್ವ ನಿರ್ಧಾರ ಇಲ್ಲದೇ ಬಿಜೆಪಿಗೆ ಸೇರ್ಪಡೆ ಆಗಿದ್ದೇನೆ
ಸ್ಥಳೀಯ ಕಾರ್ಯಕರ್ತರ ವಿಶ್ವಾಸ ಪಡೆಯದೆ ಬಿಜೆಪಿ ಯಾರನ್ನು ಸೇರಿಸಿಕೊಳ್ಳುವುದಿಲ್ಲ. ಆದರೆ ಕಾಂಗ್ರೆಸ್ ಗೆ ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು . ನನ್ನ ಬೆಂಬಲಿಗರಲ್ಲಿ ಯಾರಿಗೆಲ್ಲಾ ಬಿಜೆಪಿ ಸೇರ್ಪಡೆಗೆ ಆಸಕ್ತಿ ಇದೆ ಕೇಳಿಲ್ಲ. ಕಾಂಗ್ರೆಸ್‌ ಬಿಜೆಪಿ ಕಾರ್ಯಕರ್ತರು ಪರಸ್ಪರ ವಿರೋಧಿಗಳಾಗಿರುತ್ತಾರೆ. ಯಾರನ್ನೂ  ಬಿಜೆಪಿ ಸೇರಲು ಬಲವಂತ ಮಾಡುವುದಿಲ್ಲ. ಸೇರ್ಪಡೆಗೂ ಮುನ್ನ ಕಾರ್ಯಕರ್ತರ ಷರತ್ತುಗಳನ್ನು ಕೇಳಬೇಕಾಗುತ್ತದೆ. ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಭೇಟಿಯಾಗಿದ್ದೇನೆ. ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡಬೇಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಮುಂದೆ ನಡೆಯಲಿದೆ ಅಂತ ಹೇಳಿದರು. ಬಿಜೆಪಿಯಲ್ಲಿ ಪ್ರಮೋದ್ ಮಧ್ಚರಾಜ್ ಗೆ ವೇದಿಕೆ ಸಿಗುವುದಿಲ್ಲ ಡಿಕೆಶಿ ಲೇವಡಿಗೆ ಉತ್ತರಿಸಿ,  ಕಾಂಗ್ರೆಸ್ ನ ಸಂಪ್ರದಾಯಕ್ಕೂ ಬಿಜೆಪಿ ಸಂಪ್ರದಾಯಕ್ಕೂ ಬಹಳಷ್ಟು ವ್ಯತ್ಯಾಸ ಇದೆ ಕಾಂಗ್ರೆಸ್ ವೇದಿಕೆಗಳಲ್ಲಿ ಜನಜಂಗುಳಿ ಇರುತ್ತದೆ...ಎಲ್ಲರೂ ವೇದಿಕೆಗೆ ಹತ್ತುವವರೇ ಇರುವುದು
ಬಿಜೆಪಿಯಲ್ಲಿ ಹಾಗಿಲ್ಲ, ಶಿಸ್ತಿದೆ.ಬಿಜೆಪಿಯಲ್ಲಿ ಮಂತ್ರಿ, ಶಾಸಕ, ಸಂಸದರು ಕೂಡಾ ಕೆಳಗೆ ಕುಳಿತು ಕೊಳ್ಳುತ್ತಾರೆ.ಬಿಜೆಪಿಯ ಸಂಪ್ರದಾಯವನ್ನು ಡಿಕೆ ಶಿವಕುಮಾರ್ ಕಲಿಯೋದು ಒಳ್ಳೆಯದು. ಅವರಿಗೆ ಪುಕ್ಕಟೆ ಸಲಹೆ ಕೊಡುತ್ತೇನೆ. ವೇದಿಕೆ ಹುಡುಕಿಕೊಂಡು ಹೋಗುವ ಜಾಯಮಾನ ನನ್ನದಲ್ಲ
ಬಿಜೆಪಿಗೆ ಕಾರ್ಯಕರ್ತನಾಗಿ ಸೇರಿದ್ದೇನೆ, ಕಾರ್ಯಕರ್ತನೊಟ್ಟಿಗೆ ಕುಳಿತುಕೊಳ್ಳುತ್ತೇನೆ  ಇದರಲ್ಲಿ ನನಗೆ ಯಾವ ಮುಜುಗರ, ಬೇಸರ ಇಲ್ಲ ಅಂತ ಪ್ರಮೋದ್ ಹೇಳಿಕೆ ನೀಡಿದರು..
..



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99