ಉಡುಪಿ-ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ?
Sunday, May 22, 2022
ಕಾರಿನೊಳಗೆ ಪೆಟ್ರೋಲ್ ಸುರಿದುಕೊಂಡು ಯುವ ಜೋಡಿ ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಘಟನೆ ಉಡುಪಿ ಜಿಲ್ಲೆಯ
ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಮುಂಜಾನೆ 3:00 ಗಂಟೆ ಸುಮಾರಿಗೆ ಸುಡುತ್ತಿತ್ತು, ಇದನ್ನು ಗಮನಿಸಿದ ಸ್ಥಳೀಯರು ಅವಘಡವಾಗಿ ಕಾರು ಬೆಂಕಿ ತಗುಲಿರಬಹುದು ಅಂತ ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆಗ ಕಾರಿನೊಳಗೆ ಯುವಕ ಹಾಗೂ ಯುವತಿ ಪತ್ತೆಯಾಗಿದ್ದಾರೆ.
ಬೆಂಗಳೂರು ಆರ್.ಟಿ.ನಗರದ ಯಶವಂತ ಯಾದವ್ , ಜ್ಯೋತಿ ಸಾವನ್ನಪ್ಪಿದ ಯುವಕ ಯುವತಿಯಾಗಿದ್ದು,
ಕಳೆದ ಮೂರು ದಿನಗಳ ಹಿಂದೆ ಬೆಂಗಳೂರಿನ ಠಾಣೆಯೊಂದರಲ್ಲಿ ಮಿಸ್ಸಿಂಗ್ ಕೇಸು ದಾಖಲಾಗಿತ್ತು ಎನ್ನಲಾಗಿದೆ. ನಿನ್ನೆ ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಕಾರು ಬಾಡಿಗೆ ಪಡೆದಿದ್ದರು. ಘಟನೆಯಲ್ಲಿ
ಸ್ವಿಫ್ಟ್ ಕಾರ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಬ್ರಹ್ಮಾವರ ಠಾಣಾ ತನಿಖೆ ನಡೆಸುತ್ತಿದ್ದಾರೆ..