
ಉಡುಪಿ-ಕೆರೆಯಲ್ಲಿ ಮುಳುಗಿ 8 ವರ್ಷದ ಬಾಲಕ ಸಾವು
Monday, May 23, 2022
ಕೆರೆಯಲ್ಲಿ ಮುಳುಗಿ ಬಾಲಕ ಸಾವು ಬಾಲಕನೊಬ್ಬ ಸಾವನ್ನಪಿದ ಘಟನೆ ಉಡುಪಿಯ ಕಡೆಕಾರಿನ ಮಂದಿರದ ಬಳಿ ನಡೆದಿದೆ.
ಕಡೆಕಾರು ನಿವಾಸಿ ಗಿರೀಶ್ ಉಪಾಧ್ಯಾಯ ಎಂಬವರ ಪುತ್ರ ರಾಘವ (8) ಮೃತಪಟ್ಟ ಬಾಲಕ. ಕಿದಿಯೂರು ಆಂಗ್ಲಮಾದ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿ ಈತ. ನಿನ್ನೆ ಸಂಜೆ ಮನೆ ಬಳಿ ಆಟವಾಡಲು ಜಾರು ಬಂಡಿಗೆ ಹೋಗಿದ್ದ.ಬಳಿಕ ಕೈಕಾಲು ತೊಳೆಯಲು ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಶನಿವಾರ ರಾತ್ರಿ 12 ಗಂಟೆಯವರೆಗೆ ಹುಡುಕಾಟ ನಡೆಸಿದರೂ ಪತ್ತೆಯಾಗದ ಕಾರಣ ಬೆಳಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಬಾಲಕನ ಮೃತದೇಹವನ್ನು ಪತ್ತೆ ಹಚ್ಚಿ ಮೇಲೆತ್ತಿದ್ದಾರೆ.