![ಉಡುಪಿ-ಬೋಟ್ ಮುಳುಗಡೆ ; 5 ಮಂದಿ ಮೀನುಗಾರರ ರಕ್ಷಣೆ ಉಡುಪಿ-ಬೋಟ್ ಮುಳುಗಡೆ ; 5 ಮಂದಿ ಮೀನುಗಾರರ ರಕ್ಷಣೆ](https://blogger.googleusercontent.com/img/b/R29vZ2xl/AVvXsEiUtQnFILUEXiWCbSytVBxYivP286N55VkSVsth_eqgieYmCZxAFDDECgyfSudElENJ6-j9tIEk1hfG6No-hIv32Iq849eS4ePA7VcvUtxCwDS8TOSsRsN2bstpUNr7nL3Ls5pdhtDlIGc/s1600/1653284818502862-0.png)
ಉಡುಪಿ-ಬೋಟ್ ಮುಳುಗಡೆ ; 5 ಮಂದಿ ಮೀನುಗಾರರ ರಕ್ಷಣೆ
Monday, May 23, 2022
ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳಿದ್ದ ಬೋಟ್ ಸಮುದ್ರದ ಅಲೆಗೆ ಸಿಲುಕಿ ಮುಳುಗಡೆಯಾದ ಉಡುಪಿ ಜಿಲ್ಲೆಯ ಬೈಂದೂರಿನ ಶಿರೂರು ಎಂಬಲ್ಲಿ ನಡೆದಿದೆ.
ಬೋಟ್‌ನಲ್ಲಿದ್ದ ಐದು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಶಿರೂರು ನಾಖುದಾ ಮೊಹಲ್ಲದಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಬೀಬಿ ಆಮೀನಾ ಬೋಟ್, ಸಮುದ್ರದ ಸಮುದ್ರ ಮಧ್ಯೆ ತಲುಪುತ್ತಿದ್ದಂತೆ ಮುಳುಗಡೆಯಾಗಿದೆ. ಕೂಡಲೇ ಇತರೆ ಬೋಟ್‌ನಲ್ಲಿದ್ದ, ಮೀನುಗಾರರಾದ ಸದ್ಕೆ ಮುಷ್ತಾಕ್, ರೋಗೆ ಅಬೂಬಕ್ಕರ್, ಭೋಂಬಾ ಮೀರಾ, ದಾಂಡಯ್ಯ ಅಶ್ರಫ್, ಬೋಡರ್ನಿ ಶಬ್ಬೀರ್ ಎಂಬವರನ್ನು ರಕ್ಷಣೆ ಮಾಡಿದ್ದಾರೆ. ಬೋಟ್ ಮುಳುಗಡೆಯಾಗಿ ಸುಮಾರು 10 ಲಕ್ಷ ರೂ ನಷ್ಟ ಉಂಟಾಗಿದೆ