
ಉಡುಪಿಯಲ್ಲಿ ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಜೋಡಿಗಳ ಅಂತ್ಯಕ್ರಿಯೆ
ಉಡುಪಿಯ ಬ್ರಹ್ಮಾವರದ ಹೆಗ್ಗುಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರಿನ ಜೋಡಿಯ ಶವವನ್ನು ಉಡುಪಿಯ ಇಂದ್ರಾಳಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಬೆಂಗಳೂರಿನ ಯಶವಂತ ಹಾಗೂ ಜ್ಯೋತಿ
ಹೆಗ್ಗುಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಇಬ್ಬರು ದೇಹವು ಸುಟ್ಟು ಕರಕಲಾದ ಹಿನ್ನೆಲೆ ಇಬ್ಬರ ಪೋಷಕರು ಉಡುಪಿಯಲ್ಲೇ ಅಂತ್ಯಕ್ರಿಯೆ ನಡೆಸುವ ತೀರ್ಮಾನಕ್ಕೆ ಬಂದಿದ್ದರು
ತಡರಾತ್ರಿ ಒಂದು ಗಂಟೆಗೆ ಇಂದ್ರಾಳಿಯ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು. ಅಂತಿಮ ಸಂಸ್ಕಾರ ಪೂರೈಸಿ ಬೂದಿಯನ್ನು ಕುಟುಂಬಸ್ಥರು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ.