UDUPI: ರೈಲಿನಿಂದ ಆಯತಪ್ಪಿ ಬಿದ್ದ ಯುವಕ- VIDEO
Thursday, May 26, 2022
ಉಡುಪಿ; ರೈಲಿನಿಂದ ಇಳಿಯುತ್ತಿದ್ದಾಗ
ಆಯತಪ್ಪಿ ಬಿದ್ದು, ರೈಲಿನೊಂದಿಗೆ ಎಳೆದೊಯ್ದ ವ್ಯಕ್ತಿಯನ್ನು ರೈಲ್ವೇ ನಿಲ್ದಾಣದ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ರೈಲ್ವೇ ನಿಲ್ದಾಣದಲ್ಲಿ ಇಂದು ನಡೆದಿದೆ.
ಉಡುಪಿ ರೈಲ್ವೇ ನಿಲ್ದಾಣ ದ ಪ್ಲಾಟ್ ಫಾರಂ ನಂಬರ್ ೧ ರಲ್ಲಿ ಈ ಘಟನೆ ನಡೆದಿದ್ದು, ಪೆರ್ಡೂರು ಮೂಲದ ಕುತಿ ಕುಂದನ್ (೭೦ ವರ್ಷ) ರಕ್ಷಣೆಯಾದ ವ್ಯಕ್ತಿ. ತಮ್ಮ ಮಗಳನ್ನು ಟ್ರೈನ್ ಹತ್ತಿಸುವ ಸಲುವಾಗಿ ಉಡುಪಿ ರೈಲ್ವೇ ನಿಲ್ದಾಣಕ್ಕೆ ಕುತಿ ಕುಂದನ್ ಆಗಮಿಸಿದ್ದರು.
ರೈಲಿನಲ್ಲಿ ಮಗಳನ್ನು ಕುಳ್ಳಿರಿಸಿ ಚಲಿಸುವ ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದಿದ್ದು ರೈಲಿನ ಬಾಗಿಲಿನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ರೈಲಿನೊಂದಿಗೆ ಎಳೆದೊಯ್ಯಲ್ಪಡುತಿದ್ದರು. ಗಮನಿಸಿದ ರೈಲ್ವೆ ಪೋಲಿಸ್ ಸಿಬ್ಬಂದಿ ಸಜೀರ್ ಕೂಡಲೇ ಬಂದು ಅವರನ್ನು ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.