
ಉಡುಪಿ: ಅಪಘಾತ ಭಯಾನಕ ದೃಶ್ಯ CCTV ಯಲ್ಲಿ ಸೆರೆ
ಉಡುಪಿಯ ಲಕ್ಷ್ಮೀಂದ್ರ ನಗರದ ಬಳಿ ನಡೆದ ಅಪಘಾತದ ಭಯಾನಕ ದೃಶ್ಯ, ರಸ್ತೆ ಬಳಿ ಇರುವ ಕಟ್ಟಡದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕೋಟೇಶ್ವರ ನಿವಾಸಿ ಶೋದನ್ ಶೆಟ್ಟಿ ಸಾವನ್ಪಿದ್ದು, ಹಿಂಬದಿಯಲ್ಲಿ ಸವಾರ ಆಡ್ರಿನ್ ವಾಸ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಣಿಪಾಲದಿಂದ ಉಡುಪಿ ಕಡೆ ಬರುತ್ತಿದ್ದಾಗ ಲಕ್ಷ್ಮೀಂದ್ರ ನಗರದ ಬಳಿ, ನಿಯಂತ್ರಣ ತಪ್ಪಿ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತ ತೀವ್ರತೆಗೆ ಶೋದನ್ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಡ್ರಿನ್ ವಾಸ್ ಗಂಭೀರ ಗಾಯಗೊಂಡಿದ್ದ. ಬೈಕ್ ಡಿವೈಡರ್‌ಗೆ ಡಿಕ್ಕಿಯಾಗುವ ಭೀಕರ ದೃಶ್ಯ ಪಕ್ಕದ ಕಟ್ಟದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.