ಮಹಿಳೆ Order ಮಾಡಿದ್ದು ಪರೋಟ - ಪಾರ್ಸೆಲ್‌ನಲ್ಲಿತ್ತು ಹಾವಿನ ಚರ್ಮ
Sunday, May 8, 2022
ತಿರುವನಂತಪುರಂ: ಮಹಿಳೆಯೋರ್ವಳು ಆರ್ಡರ್ ಮಾಡಿದ್ದ ಪರೋಟಾ ಪಾರ್ಸೆಲ್ ಜೊತೆ ಹಾವಿನ ಚರ್ಮವೂ ಸೇರಿಕೊಂಡಿದ್ದ ಘಟನೆ ತಿರುವನಂತಪುರಂ ನ ನೆಡುಮಾಂಗಾಡ್ ಎಂಬಲ್ಲಿ ನಡೆದಿದೆ.
ಪ್ರಿಯಾ ಎಂಬ ಮಹಿಳೆ ಇಲ್ಲಿನ ಶಾಲಿಮಾರ್ ಹೊಟೇಲ್‌ನಿಂದ ಪರೋಟಾ ಪಾರ್ಸೆಲ್ ಪಡೆದಿದ್ದಳು. ಮನೆಗೆ ಬಂದು ಪರೋಟಾ ಪೊಟ್ಟಣ ತೆರೆದಾಗ ಅದರಲ್ಲಿ ಸತ್ತ ಹಾವಿನ ಚರ್ಮ ಕಂಡು ಬಂದಿದೆ. ಕೂಡಲೇ ಮಹಿಳೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ನೀಡಿದ್ದು, ಅಧಿಕಾರಿಗಳು ಹೊಟೆಲ್ ಗೆ ತೆರಳಿ ಹೊಟೇಲನ್ನು ಮುಚ್ಚಿಸಿದ್ದಾರೆ.