
Kerala: ಅಂತ್ಯಸಂಸ್ಕಾರದ 60 ದಿನಗಳ ಬಳಿಕ ಸ್ಮಶಾನದಿಂದ ಮೃತದೇಹ ಹೊರತೆಗೆದು post mortem ಮಾಡಿದ ಪೊಲೀಸರು
Sunday, May 8, 2022
ಕೋಝಿಕೋಡ್: ದುಬೈಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಕೇರಳದ ಕೋಝಿಕ್ಕೋಡ್ ಮೂಲದ ಯೂಟ್ಯೂಬರ್ ರಿಫಾ ಎಂಬಾಕೆಯ ಮೃತದೇಹವನ್ನು ಪೋಸ್ಟ್ ಮಾರ್ಟಂಗಾಗಿ ಪೊಲೀಸರು ಸ್ಮಶಾನದಿಂದ ಹೊರತೆಗೆದಿದ್ದಾರೆ.
ರಿಫಾ ಸಾವಿನ ಬಗ್ಗೆ ಆಕೆಯ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದು, ಸ್ಮಶಾನದಿಂದ ಹೊರತೆಗದ ಮೃತದೇಹವನ್ನು ಕೋಝಿಕೋಡ್ ಸರಕಾರಿ ಆಸ್ಪತ್ರೆಗೆ ಕಳುಹಿಸಾಗಿದೆ. ಮೃತದೇಹದ ಇನ್ಕ್ವೆಸ್ಟ್ ಬಳಿಕ ಮತ್ತೆ ಅದೇ ಸ್ಮಶಾನದಲ್ಲಿ ದಫನ ಮಾಡಲಾಯಿತು.
ಮಾರ್ಚ್ ಒಂದರಂದು ರಿಫಾ ದುಬೈನಲ್ಲಿನ ತನ್ನ ಫ್ಲಾಟ್ ನಲ್ಲಿ ನೇಣುಬಿಗಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಳು. ತನ್ನ ಪತಿ ಮೆಹನಾಝ್ ಜೊತೆ ರಿಫಾ ವಾಸವಾಗಿದ್ದಳು. ದುಬೈ ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಮೃತದೇಹವನ್ನು ಪೋಸ್ಟ್ ಮಾರ್ಟಂ ಮಾಡದೇ ಊರಿಗೆ ಕಳುಹಿಸಿದ್ದರು.
ಆದರೆ ರಿಫಾ ಮನೆಯರು ಪತಿ ಮೆಹ್ನಾಝ್ ಮೇಲೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮತ್ತೆ ಪೋಸ್ಟ್ ಮಾರ್ಟಂ ಮಾಡಲಾಯಿತು.