![Shooting ಮುಗಿಸಿ ಮನೆಗೆ ಹಿಂದಿರುಗುವಾಗ ಅಪಘಾತ: ಆಸ್ಪತ್ರೆ ಸೇರಿದ ಆ sandalwood ನಟಿ ಯಾರು? Shooting ಮುಗಿಸಿ ಮನೆಗೆ ಹಿಂದಿರುಗುವಾಗ ಅಪಘಾತ: ಆಸ್ಪತ್ರೆ ಸೇರಿದ ಆ sandalwood ನಟಿ ಯಾರು?](https://lh3.googleusercontent.com/-tfvBMNEq6eA/Yndbo6xoszI/AAAAAAAAHKw/YIdjxJQo1OAhM9sfi_LHU2Wfv3bXD1U7QCNcBGAsYHQ/s1600/1651989405086387-0.png)
Shooting ಮುಗಿಸಿ ಮನೆಗೆ ಹಿಂದಿರುಗುವಾಗ ಅಪಘಾತ: ಆಸ್ಪತ್ರೆ ಸೇರಿದ ಆ sandalwood ನಟಿ ಯಾರು?
Sunday, May 8, 2022
ಬೆಂಗಳೂರು: ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ಸ್ಯಾಂಡಲ್‌ವುಡ್ ಪೋಷಕ ನಟಿ, ಸಿಲ್ಲಿ ಲಲ್ಲಿ ಖ್ಯಾತಿಯ ಸುನೇತ್ರ ಪಂಡಿತ್ ಅಪಘಾತಕ್ಕೀಡಾಗಿದ್ದು, ಗಾಯಾಳು ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುನೇತ್ರರವರು ತಡರಾತ್ರಿ ಶೂಟಿಂಗ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಎನ್ ಆರ್ ಕಾಲೋನಿ 9 ನೇ ಅಡ್ಡ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ ಮತ್ತು ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ನಟಿ ಸುನೇತ್ರಾ ತಲೆಗೆ ಗಾಯಗಳಾಗಿದೆ.