ಉಡುಪಿ; ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ ; Nalapad ವ್ಯಂಗ್ಯ
Friday, May 13, 2022
ರಮ್ಯ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ
ಇಷ್ಟು ತಿಂಗಳು ಇಷ್ಟು ವರ್ಷ ರಮ್ಯ ಎಲ್ಲಿದ್ದರೂ
ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದರು ಅಂತ
ಅಧ್ಯಕ್ಷ ನಲಪಾಡ್ ಹ್ಯಾರಿಸ್ ರಮ್ಯ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.
ನಟಿ ರಮ್ಯಾ ಹಾಗೂ ಡಿಕೆಶಿ ನಡುವಿನ ಟ್ವೀಟ್ ವಾರ್ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ,
ನಲಪಾಡ್ ಹ್ಯಾರಿಸ್, ರಮ್ಯ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತ ತೋರಿಸಿಕೊಳ್ಳುತ್ತಿದ್ದಾರಾ ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ ರಮ್ಯಾ ಬಂದದ್ದು ಯಾಕೆ ಹೀಗೆಲ್ಲ ಮಾಡುತ್ತಿರುವುದು ಯಾವುದಕ್ಕೆ ಅಂತ ನಾವು ಅರ್ಥಮಾಡಿಕೊಳ್ಳಬೇಕು ಅಂತ ಹೇಳಿದರು.
ಡಿಕೆ ಶಿವಕುಮಾರ್ ಅವರು ಬಹಳ ಕ್ಲಿಯರಾಗಿ ಇವತ್ತು ಸ್ಪಷ್ಟಪಡಿಸಿದ್ದಾರೆ. ಎಂಬಿ ಪಾಟೀಲ್ ಅಶ್ವತ್ ನಾರಾಯಣ್ ಭೇಟಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ
ಹೌದಪ್ಪ.. ಬಂದಿರಬಹುದು ರಕ್ಷಣೆಗೋಸ್ಕರ ಎಂದು ಹೇಳಿದ್ದಾರೆ ಎಂಬಿ ಪಾಟೀಲ್ ಹೋಗಿದ್ದಾರೆ ಎಂದು ಎಲ್ಲೂ ಡಿಕೆ ಶಿವಕುಮಾರ್ ಹೇಳಿಲ್ಲ ಕಾಂಗ್ರೆಸ್ ಎಲ್ಲ ನಾಯಕರು ಒಗ್ಗಟ್ಟಾಗಿದ್ದಾರೆ. ಡಿಕೆಶಿ ಎಂಬಿ ಪಾಟೀಲ್ ಸಿದ್ದರಾಮಯ್ಯ ನಾವೆಲ್ಲ ಜೊತೆಗಿದ್ದೇವೆ ಅಂತ ಹೇಳಿದರು. ರಮ್ಯಾ ಸಡನ್ನಾಗಿ ಯಾಕೆ ನಮ್ಮ ನಾಯಕರ ಮೇಲೆ ಬಿದ್ದಿದ್ದಾರೆ ಇದರಲ್ಲಿ ಯಾವುದೋ ಒಳ ಉದ್ದೇಶ ಇದೆ. ನಟಿ ರಮ್ಯಾಗೆ ಯಾರು ಹೆಚ್ಚು ಇಂಪಾರ್ಟೆನ್ಸ್ ಕೊಡಬಾರದು ತ ಉಡುಪಿಯಲ್ಲಿ ಮಾಧ್ಯಮಗಳಿಗೆ ಕೈಮುಗಿದು ಕೇಳಿಕೊಂಡ ನಲಪಾಡ್ ಕೇಳಿಕೊಂಡರು..