ಉಡುಪಿ- ಬೆಲೆ ಏರಿಕೆ,ನಿರುದ್ಯೋಗ, ಕಮಿಷನ್ ವಿಚಾರ ಖಂಡಿಸಿ ಯೂತ್ CONGRESS ಪ್ರತಿಭಟನೆ
Friday, May 13, 2022
ಬೆಲೆ ಏರಿಕೆ,ನಿರುದ್ಯೋಗ, ಕಮಿಷನ್ ವಿಚಾರದಲ್ಲಿ ಅವ್ಯವಹಾರ ವಿರೋಧಿಸಿ ಪ್ರತಿಭಟನೆ ಉಡುಪಿಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ರಾಜ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್ ನೇತೃತ್ವದಲ್ಲಿ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಎದುರು ಕಾಂಗ್ರೆಸ್ ಕಾರ್ಯಕರ್ತರು
ಪ್ರತಿಭಟನೆ ನಡೆಸಿದರು. ದಕ್ಷಿಣ ಕನ್ನಡ ಮೂಲದ ಯುವತಿ ಸಹನಾ ಉದ್ಯೋಗ ಸಿಗದೆ ಉಡುಪಿಯ ಶಿರ್ವದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಖಂಡಿಸಿ ಸರ್ಕಾರ ಕ್ಕೆ ಧಿಕ್ಕಾರ ಕೂಗಿದ ಕಾರ್ಯಕರ್ತರು, ಯುವತಿಯ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಅಲ್ಲದೇ ಯೂತ್ ಕಾಂಗ್ರೆಸ್ ನಿಂದ ಒಂದು ಲಕ್ಷ ಪರಿಹಾರ ನೀಡುವುದಾಗಿ ನಲಪಾಡ್ ಘೋಷಿಸಿದರು