ಉಡುಪಿಯಲ್ಲಿ ಬಲೆಗೆ ಸಿಕ್ಕಿತು ರಾಶಿ ರಾಶಿ ಬೂತಾಯಿ ಮೀನು! - video ನೋಡಿ
Friday, May 13, 2022
ಉಡುಪಿಯ ಕಾಪು ಕೈಪುಂಜಾಲುವಿನಲ್ಲಿ, ಓಂ ಸಾಗರ್ ಜೋಡು ದೋಣಿಯಲ್ಲಿ ಕಡಲಿಗೆ ತೆರಳಿದ್ದ ಮೀನುಗಾರರಿಗೆ ಅದೃಷ್ಟ ಖುಲಾಯಿಸಿತ್ತು, ಮೀನುಗಾರರ ಬಲೆಗೆ ರಾಶಿ ರಾಶಿ ಬೂತಾಯಿ ಮೀನುಗಳು ಬಿದ್ದಿದೆ.
ಸುಮಾರು 30 ಟನ್ ಬೂತಾಯಿ ಬಲೆಗೆ ಬಿದ್ದಿದ್ದು, 30 ಲಕ್ಷಕ್ಕೂ ಹೆಚ್ಚಿನ ದರದಲ್ಲಿ ಮಾರಾಟವಾಗಿದೆ. ಅಸಾನಿ ಚಂಡ ಮಾರುತದ ಪರಿಣಾಮದಿಂದ ಕಡಲು ಪ್ರಕ್ಷ್ಯುಬ್ದ ಗೊಂಡಿದ್ದು, ಭೂತಾಯಿ ಮೀನು ಗಂಗೊಳ್ಳಿಯಿಂದ ಮಂಗಳೂರು ಕರಾವಳಿ ತೀರದಲ್ಲಿ ಹೆಚ್ಚಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಕಡಲಿನಲ್ಲಿ ಬೀಸಿದ ಬಲೆಗೆ ರಾಶಿ ರಾಶಿ ಬೂತಾಯಿ ಮೀನುಗಳು ಬೀಳುತ್ತಿರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ..