ವರ್ಷದ ಮೊದಲ ಚಂದ್ರಗ್ರಹಣ ಈ 3 ರಾಶಿಯವರ ಅದೃಷ್ಟ ವನ್ನು ಬದಲಾಯಿಸುತ್ತದೆ..!!
Saturday, May 14, 2022
ವರ್ಷದ ಮೊದಲ ಚಂದ್ರಗ್ರಹಣವು ಇದೇ ಮೇ ಮಾಸದ ಮಧ್ಯಭಾಗದಲ್ಲಿ ಅಂದರೆ ಮೇ 16ರಂದು ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಈ ಮೂರು ರಾಶಿಯವರ ಭವಿಷ್ಯವು ಉಜ್ವಲವಾಗಲಿದೆ.
ವರ್ಷದ ಮೊದಲ ಚಂದ್ರ ಗ್ರಹಣವು ಮೇಷ ರಾಶಿಯ ಜನರಿಗೆ ಮಂಗಳಕರ ಎಂದು ಹೇಳಲಾಗಿದೆ. ಈ ರಾಶಿಯ ವ್ಯಕ್ತಿಗಳಿಗೆ ಧನ ಲಾಭ ಉಂಟಾಗುವುದಲ್ಲದೆ, ಸಮಾಜದಲ್ಲಿ ಗೌರವಯುತ ಸ್ಥಾನಮಾನವನ್ನು ಪಡೆಯುತ್ತಾರೆ. ಇವರು ಯಾವುದೇ ಕೆಲಸ ಮಾಡಲಿ, ಅದರಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಗಳಿಸಲಿದ್ದಾರೆ. ಇನ್ನು ವೃತ್ತಿ ಕ್ಷೇತ್ರದ ವಿಷಯಕ್ಕೆ ಬಂದರೆ ಅಲ್ಲೂ ಸಹ ಇವರಿಗೆ ಉತ್ತಮ ಫಲ ಇದ್ದು, ಉದ್ಯೋಗದಲ್ಲಿ ಬಡ್ತಿ ಪಡೆಯುವ ಎಲ್ಲ ಸಾಧ್ಯತೆಗಳೂ ಇವೆ.
ಸಿಂಹ ರಾಶಿ
ಸಿಂಹ ರಾಶಿಯ ವ್ಯಕ್ತಿಗಳಿಗೆ ಈ ಗ್ರಹಣವು ಶುಭ ಫಲವನ್ನು ಹೊತ್ತು ತರಲಿದೆ. ಈ ರಾಶಿಯವರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗಲಿದ್ದು, ಅವರು ದೃಢ ಮನಸ್ಸಿನಿಂದ ಹೆಜ್ಜೆಯನ್ನಿಡಬೇಕು ಎಂದು ಹೇಳಲಾಗಿದೆ. ಇನ್ನು ಇವರು ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಹೂಡಿಕೆ ಮಾಡಲು ಸಹ ಇದು ಸಕಾಲ. ಇವರು ಯಾವುದೇ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸು ಮತ್ತು ಲಾಭ ಸಿಗುತ್ತದೆ.
ಧನುಸ್ಸು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಚಂದ್ರಗ್ರಹಣವು ಧನು ರಾಶಿಯ ವ್ಯಕ್ತಿಗಳಿಗೆ ಬಹಳವೇ ಲಾಭದಾಯಕವಾಗಿದೆ. ಈ ರಾಶಿಯವರು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಬಹುದಾಗಿದ್ದು, ಹೂಡಿಕೆ ಮಾಡಿದರೂ ಸಹ ಲಾಭವನ್ನು ಗಳಿಸಲಿದ್ದಾರೆ. ಇನ್ನು ಇವರು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳೂ ದಟ್ಟವಾಗಿವೆ.