ಉಡುಪಿಯಲ್ಲಿ ಕಾರಿನಲ್ಲಿ LOVERS ಆತ್ಮಹತ್ಯೆ ಮಾಡಿಕೊಂಡ ಪ್ರಕರಣ- ಪೊಲೀಸರು ಹೇಳಿದ್ದು ಹೀಗೆ...
Tuesday, May 24, 2022
ಬೆಂಗಳೂರು ಮೂಲದ ಜೋಡಿ ಯಶವಂತ್ ಯಾದವ್ ಹಾಗೂ ಜ್ಯೋತಿ ಉಡುಪಿಯಲ್ಲಿ ಸಾವನ್ಪಿದ ಕುರಿತಾಗಿ, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಿಕೊಂಡಿದ್ದೇವೆ ಪ್ರಕರಣವನ್ನು ಕೊಲೆ ಎಂಬ ಆಯಾಮದಲ್ಲೂ ತನಿಖೆ ಮಾಡುತ್ತೇವೆ ಅಂತ ಉಡುಪಿ ಎಎಸ್‌ಪಿ ಸಿದ್ದಲಿಂಗಪ್ಪ ಹೇಳಿದ್ದಾರೆ.
ಅಸಹಜ ಸಾವಿನಂತೆ ಕಂಡುಬರುತ್ತಿದೆ. ನಾವು ಕೊಲೆ ನಡೆದಿರಬಹುದು ಎಂಬ ಆಯಾಮದಲ್ಲೂ ತನಿಖೆ ಮಾಡುತ್ತೇವೆ. ಯಶವಂತ್ ಯಾದವ ಮೆಸೇಜ್ ಮಾಡಿದ್ದಾನೆ ಅಥವಾ ಬೇರೆ ಯಾರಾದರೂ ಮೆಸೇಜ್ ಮಾಡಿರಬಹುದೇ ಎಂದು ತನಿಖೆ ಮಾಡುತ್ತೇವೆ
ಎಲ್ಲಾ ಆಯಾಮದಲ್ಲಿ ನಾವು ತನಿಖೆ ಮಾಡುತ್ತಿದ್ದೇವೆ
ಇಬ್ಬರು ಹಿಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು ರಸ್ತೆಯ ಡೆಡ್ ಎಂಡ್ ನಲ್ಲಿ ಕಾರು ಸುಡುತ್ತಿತ್ತು
ಸಾಮಾನ್ಯವಾಗಿ ಕಾರಿನ ಒಳಗೆ ಬೆಂಕಿ ಹಾಕಿಕೊಂಡು ಯಾರೂ ಆತ್ಮಹತ್ಯೆ ಮಾಡುವುದಿಲ್ಲ. ಹೀಗಾಗಿ ಹಲವು ಸಂಶಯಗಳು ಇರುವುದರಿಂದ ನಾವು ಆ ದಾರಿಯಲ್ಲಿ ತನಿಖೆಯನ್ನು ಮಾಡುತ್ತೇವೆ ಅಂತ ಉಡುಪಿ ಎ ಎಸ್ ಪಿ ಸಿದ್ದಲಿಂಗಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ