ಉಡುಪಿಯಲ್ಲಿ ಕಡಲ ನೀರಿನ ಬಣ್ಣ ಬದಲು..!
Tuesday, May 24, 2022
ಉಡುಪಿ ಕುಂದಾಪುರದ ಬೀಜಾಡಿ, ಕೋಡಿ ಮರವಂತೆ ಕಡಲ ತಡಿಯಲ್ಲಿ ಸಮುದ್ರ ನೀರಿನ ಬಣ್ಣ ಬದಲಾಗಿದ್ದು, ಮುಟ್ಟಿದರೆ ಕೈಗೆ ಅಂಟುವ ಎಣ್ಣೆ ಜಿಡ್ಡು, ಹಾಗೂ ಮೈಕ್ರೋ ಪ್ರಾಸ್ಟಿಕ್ ತುಣುಕುಗಳು ಪತ್ತೆಯಾಗಿದೆ.
ಸಮುದ್ರ ತೀರಕ್ಕೆ ತೈಲ ತ್ಯಾಜ್ಯ ಬರುವುದು ಸಾಮಾನ್ಯ ಆದರೆ ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ತೈಲ ಬಂದಿಲ್ಲ. ಕಡಲ ನೀರು ಮುಟ್ಟಿದರೆ ತುರಿಕೆ ಯಾಗುತ್ತಿದೆ. ನೀರು ಸುಟ್ಟ ಎಣ್ಣೆ ವಾಸನೆ ಬರುತ್ತಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಹಡಗುಗಳ ತ್ಯಾಜ್ಯವನ್ನು ಬಂದರಿನಲ್ಲಿ ಹಣ ಕಟ್ಟಿ, ಡಂಫ್ ಮಾಡುವ ವ್ಯವಸ್ಥೆ ಇದೆ ಆದರೆ ಹಣ ಉಳಿಸುವುದಕ್ಕಾಗಿ ಕೆಲವೊಂದು ಹಡಗಿನವರು, ಸಮುದ್ರದ ಮಧ್ಯೆ ಡಂಫ್ ಮಾಡುತ್ತಾರೆ.
ಮಳೆಗಾಲ ಅಬ್ಬರ ಹೆಚ್ಚಾದಾಗ ಈ ತ್ಯಾಜ್ಯ ಸಮುದ್ರತೀರಕ್ಕೆ ಬರುತ್ತದೆ. ಇನ್ನೂ ಬಳಸಿದ ಪ್ಲಾಸ್ಟಿಕ್ ಸಮುದ್ರಕ್ಕೆ ಹಾಕುದ್ದರಿಂದ ಕುಡಿ ಹುಡಿಯಾಗಿ ಆಯಿಲ್ ಜೊತೆ ಸೇರಿ ಸಮುದ್ರತೀರಕ್ಕೆ ಬರುತ್ತದೆ. ಇವುಗಳನ್ನೇ ಆಹಾರ ಅಂತ ತಿಳಿದು ಆಮೆ, ಮೀನುಗಳು ಸೇವಿಸಿ ಸಾವನ್ನಪ್ಪುತ್ತಿದೆ. ಅಲ್ಲದೆ ಇವುಗಳನ್ನು ಸೇವಿಸಿದ ಮೀನನ್ನು ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ