-->

ಈ ಐದು ರಾಶಿಗಳ ಮೇಲೆ ಶುಕ್ರನ ಕೃಪಾಯವೃಷ್ಟಿ... ಇನ್ನು 26 ದಿನ ಇವರ ಬಾಳು ಬಂಗಾರ...

ಈ ಐದು ರಾಶಿಗಳ ಮೇಲೆ ಶುಕ್ರನ ಕೃಪಾಯವೃಷ್ಟಿ... ಇನ್ನು 26 ದಿನ ಇವರ ಬಾಳು ಬಂಗಾರ...ಮೇಷ ರಾಶಿ - 
ಶುಕ್ರನ ಮೇಷ ರಾಶಿಗೆ ಪ್ರವೇಶ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭ ನೀಡಲಿದೆ, ವೃತ್ತಿ ಜೀವನದಲ್ಲಿ ಬಡ್ತಿಯ  ಸಂಕೇತಗಳಿವೆ. ಹೊಸ ನೌಕರಿಯ ಕರೆ ಬರಬಹುದು. ಪ್ರಮೋಷನ್ ಸಾಧ್ಯತೆ ಇದೆ . ಧನಲಾಭದ ಜೊತೆಗೆ ಲವ್ ಲೈಫ್ ಸುಧಾರಿಸಲಿದೆ. 

ಮಿಥುನ ರಾಶಿ - ಶುಕ್ರನ ಮೇಷ ಗೋಚರ ಮಿಥುನ ಜಾತಕದವರಿಗೆ ಲಾಭಕಾರಿ ಸಾಬೀತಾಗಲಿದೆ. ಧನಲಾಭದ ಸಂಕೇತಗಳಿವೆ. ಆದಾಯದಲ್ಲಿನ ಹೆಚ್ಚಳ ಜೀವನವನ್ನು ಖುಷಿಯಿಂದ ತುಂಬಲಿದೆ. ಮನೆಯಲ್ಲಿ ನಗುವಿನ ವಾತಾವರಣವಿರಲಿದೆೆ.

ಸಿಂಹ ರಾಶಿ - ಶುಕ್ರನ ರಾಶಿ ಪರಿವರ್ತನೆ ಸಿಂಹ ರಾಶಿಯ ಜಾತಕದವರ ಭಾಗ್ಯವನ್ನು ಬಲಪಡಿಸಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಘನತೆ-ಗೌರವ ಹೆಚ್ಚಾಗಲಿದೆ. ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ಲಭಿಸಲಿದೆ. ಹೊಸ ನೌಕರಿ ಸಿಗುವ ಸಾಧ್ಯತೆ ಇದೆ. ನೌಕರಿ ಇಲ್ಲದವರ ನೌಕರಿಯ ಹುಡುಕಾಟಕ್ಕೆ ತೆರೆಬೀಳಲಿದೆ. 

ಮಕರ  ರಾಶಿ - ಮಕರ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಮೇಷ ರಾಶಿ ಗೋಚರ ಜೀವನದಲ್ಲಿ ಹಲವು ಒಳ್ಳೆಯ ಬದಲಾವಣೆಗಳನ್ನು ತರಲಿದೆ. ಪ್ರೀತಿಯಲ್ಲಿರುವವರು ವಿವಾಹ ಬಂಧನ ಕ್ಕೆ ಒಳಗಾಗುವ ಲಕ್ಷಣಗಳಿವೆ. ವಿವಾಹಿತರ ವೈವಾಹಿಕ ಜೀವನ ಕೂಡ ಸುಖದಿಂದ ಕೂಡಿರಲಿದೆ. ಮನೆ-ವಾಹನ ಖರೀದಿಗೆ ಈ ಸಮಯ ಉತ್ತಮವಾಗಿದೆ. ಆದಾಯದಲ್ಲಿ ವೃದ್ಧಿಯ ಸಂಕೇತಗಳಿವೆ. 


ಕುಂಭ ರಾಶಿ - ಕುಂಭ ರಾಶಿಯ ಜಾತಕದವರ ಪಾಲಿಗೆ ಶುಕ್ರನ ಮೇಷ ರಾಶಿ ಗೋಚರ ಸಾಕಷ್ಟು ಶುಭವಾಗಿರಲಿದೆ. ನೌಕರಿಯಲ್ಲಿ ಬಡ್ತಿಯ ಲಕ್ಷಣಗಳು ಗೋಚರಿಸುತ್ತಿವೆ. ಗ್ಲಾಮರ್ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅತ್ಯಂತ ಶುಭವಾಗಿದೆ. ಕಮ್ಯೂನಿಕೇಶನ್ ಉತ್ತಮವಾಗಲಿದೆ. ಈ ಅವಧಿಯಲ್ಲಿ ನೀವು ಜನರ ಮೇಲೆ ಸುಲಭವಾಗಿ ನಿಮ್ಮ ಪ್ರಭಾವ ಬೀರುವಿರಿ. 

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99