'Halal ಅಲ್ಲದ ಬೀಫ್ ಕೊಡಿ' ಎಂದು ಹೈಪರ್ ಮಾರ್ಕೆಟ್ ನಲ್ಲಿ ದಾಂಧಲೆ
Monday, May 9, 2022
ಕೋಝಿಕ್ಕೋಡ್: ಹೈಪರ್ ಮಾರ್ಕೆಟ್ ಗೆ ಆಗಮಿಸಿದ ನಾಲ್ವರ ತಂಡ ನಮಗೆ ಹಲಾಲ್ ಸ್ಟಿಕ್ಕರ್ ಇಲ್ಲದ ಬೀಫ್ ಕೊಡಿ ಎಂದು ಕೇಳಿ ದಾಂಧಲೆ ನಡೆಸಿದ ಘಟನೆ ಇಲ್ಲಿನ ಪೆರಾಂಬ್ರಾ ಬಾದ್‌ಶಾ ಹೈಪರ್ ಮಾರ್ಕೆಟ್ ನಲ್ಲಿ ನಡೆದಿದೆ.
ಘಟನೆಯಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೂವರಿಗೆ ಗಾಯಗಳಾಗಿವೆ.
ಘಟನೆ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದು ಜಿಲ್ಲೆಯಲ್ಲಿ ಗಲಭೆ ಹುಟ್ಟು ಹಾಕುವ ಆರೆಸ್ಸೆಸ್ ನ ಹುನ್ನಾರ ಎಂದು ಸಿಪಿಐಎಂ, ಕಾಂಗ್ರೆಸ್ ಮತ್ತು ಯೂತ್ ಲೀಗ್ ಆರೋಪಿಸಿದೆ.