
ಉಡುಪಿ : ಮೂರೇ ದಿನಕ್ಕೆ ಕೊಚ್ಚಿ ಹೋಯ್ತು ಮಲ್ಪೆಯ ತೇಲುವ ಸೇತುವೆ ( FLOATING BRIDGE)
ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರ ಬಾರೀ ಆಕರ್ಷಣೆಗೆ ಕಾರಣವಾದ ಫ್ಲೋಟಿಂಗ್ ಬ್ರಿಡ್ಜ್ ಕಡಲ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋಗಿದೆ.
ದೇಶದಲ್ಲೇ ಎರಡನೇ ಬಾರಿಗೆ ಎಂಬಂತೆ ಸುಮಾರು ಎಂಬತ್ತು ಲಕ್ಷ ವೆಚ್ಚದಲ್ಲಿ ಮೂವರು ಪಾಲುದಾರರು ಫ್ಲೋಟಿಂಗ್ ಬ್ರಿಡ್ಜ್ ನಿರ್ಮಿಸಿದ್ದರು.
ಶುಕ್ರವಾರದಂದು ಉದ್ಘಾಟನೆಗೊಂಡು ಪ್ರವಾಸಿಗರಿಂದ ಉತ್ತಮ ರೆಸ್ಪನ್ಸ್ ಕೂಡ ಸಿಕ್ಕಿತ್ತು. ದೂರದ ಪ್ರವಾಸಿಗರು ಫ್ಲೋಟಿಂಗ್ ಬ್ರಿಡ್ಜ್‌ನಲ್ಲಿ ಎಂಜಾಯ್ ಮಾಡುದಕ್ಕೆ ತಂಡ ತಂಡವಾಗಿ ಆಗಮಿಸುತ್ತಿದ್ದರು. ಆದ್ರೆ ನಿನ್ನೆ ಜೋರಾದ ಗಾಳಿಗೆ ಅಲೆಗಳ ಅಬ್ಬರ ಹೆಚ್ಚಾಗಿ ಫ್ಲೋಟಿಂಗ್ ಬ್ರಿಡ್ಜ್ ಕೊಚ್ಚಿ ಹೋಗಿದೆ. ನಿನ್ನೆ ಪರಿಸ್ಥಿತಿ ತೀವ್ರತೆ ಅರಿತು, ಪ್ರವಾಸಿಗರಿಗೆ ಪ್ರವಾಸ ನಿರ್ಬಂಧ ವಿಧಿಸಿದ್ದರು