BJP ಸೇರ್ಪಡೆ ಬಗ್ಗೆ ಪ್ರಮೋದ್ ಮಧ್ವರಾಜ್ ಮೊದಲ ಬಾರಿಗೆ ಹೇಳಿದ್ದು ಹೀಗೆ... Video ನೋಡಿ
Tuesday, May 10, 2022
ಉಡುಪಿ
ನರೇಂದ್ರ ಮೋದಿ ಅಭಿವೃದ್ಧಿ ಕಾರ್ಯವನ್ನು ನೋಡಿ
ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದೇನೆ.
ಕೊರೊನಾ ಸಂಕಷ್ಟ ಸಂದರ್ಭವನ್ನು ಮೋದಿ ಉತ್ತಮವಾಗಿ ನಿಭಾಯಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರಳ ವ್ಯಕ್ತಿತ್ವದವರು. ಜನಸಾಮಾನ್ಯರಿಗೆ ಒಳಿತಾಗುವ ಆಡಳಿತ
ನೀಡುತ್ತಿದ್ದಾರೆ ಅಂತ ಪ್ರಮೋದ್ ಬಿಜೆಪಿ ಗುಣಗಾನ ಮಾಡಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಮೋದ್, ಪಕ್ಷದ ಪ್ರಮುಖರಾದ, ನಳಿನ್ ಕುಮಾರ್ ಕಟೀಲ್ ಜೆಪಿ ನಡ್ಡಾ, ಬಿ.ಎಲ್ ಸಂತೋಷ್ ಇವರುಗಳ ಮೇಲೆ ನನಗೆ ಪೂರ್ಣ ವಿಶ್ಚಾಸವಿದೆ. ಹೀಗಾಗಿ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಬಿಜೆಪಿ ಪಕ್ಷದ ಮುಂದೆ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಬಿಜೆಪಿ ಪಕ್ಷ ಕೂಡ ನನಗೆ ಯಾವುದೇ ಭರವಸೆಗಳನ್ನು ನೀಡಲಿಲ್ಲ. ನಾನೋರ್ವ
ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಸೀಟು ಗೆಲ್ಲುದಕ್ಕೆ ಅಳಿಲುಸೇವೆ ನೀಡುತ್ತೇನೆ. ರಾಜ್ಯದಲ್ಲಿ ಬಿಜೆಪಿ ಎಲ್ಲಿ ಕೆಲಸ ಮಾಡಲು ಹೇಳುತ್ತದೆ ಅಲ್ಲಿ ಕೆಲಸ ಮಾಡುತ್ತೇನೆ. ಮೀನುಗಾರರು ಪರವಾಗಿ ಕೆಲಸ ಮಾಡುತ್ತೇನೆ ಪಕ್ಷದ ಅಭ್ಯರ್ಥಿ ಗೆಲುವಿಗೆ ದುಡಿವೆ ಅಂತ ಪ್ರಮೋದ್ ಹೇಳಿದ್ದಾರೆ..