BJP ಸೇರ್ತಾರ ಪ್ರಮೋದ್ ಮಧ್ವರಾಜ್- ಸುಳಿವು ನೀಡಿದ್ರು ಕುಯಿಲಾಡಿ
Friday, May 6, 2022
ಮಾಜಿ ಸಚಿವ ,ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಗೆ ಬಿಜೆಪಿಗೆ ಸೇರಲು ಇದ್ದ ಇಡೆತಡೆಗಳು ನಿವಾರಣೆಯಾಗಿ, ಸದ್ಯದಲ್ಲೇ ಬಿಜೆಪಿ ಸೇರುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲಾ ಬಿಜೆಪಿಯಿಂದ ಬಿಜೆಪಿಗೆ ಸೇರ್ಪಡೆಯಾಗಲು ಗ್ರೀನ್ ಸಿಗ್ನಲ್ ಸಿಕ್ಕಿದ್ದು ,ರಾಜ್ಯ ನಾಯಕರ ಒಪ್ಪಿಗೆಯಷ್ಟೇ ಬಾಕಿ ಉಳಿದಿದೆ. ಇವತ್ತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ,ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಬಗ್ಗೆ ಹಲವು ಸುತ್ತಿನ ಮಾತುಕತೆಗಳಾಗಿವೆ. ಜಿಲ್ಲಾ ಬಿಜೆಪಿಯಿಂದ ನಮ್ಮ ಅಭಿಪ್ರಾಯ ರಾಜ್ಯ ನಾಯಕರಿಗೆ ಕಳಿಸಿದ್ದೇವೆ.ರಾಜ್ಯ ನಾಯಕರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪ್ರಮೋದ್ ಬಿಜೆಪಿ ಸೇರ್ಪಡೆ ಸುದ್ದಿ ಹರಿದಾಡುತ್ತಿದೆ.